ವೈಯಕ್ತಿಕ ಜೀವನಕ್ಕೆ ಲೈಂಗಿಕತೆ ಎಂಬುದು ತುಂಬಾನೇ ಮುಖ್ಯ. ಇದು ಸಂಬಂಧವನ್ನು ಗಟ್ಟಿಗೊಳಿಸುವ ಒಂದು ಭಾಗವೂ ಆಗಿದೆ. ಜೊತೆಗೆ ಆರೋಗ್ಯ (Health) ಸ್ವಾಸ್ಥ್ಯವನ್ನೂ ಕಾಪಾಡುತ್ತದೆ. ಆದ್ರೆ ಜೀವನಕ್ಕೆ ಸೆಕ್ಸ್ ಎಷ್ಟು ಮುಖ್ಯ ಎಂದು ಕೇಳಿದಾಗ ಒಬ್ಬೊಬ್ಬರು ಒಂದೊಂದು ಉತ್ತರ ನೀಡುತ್ತಾರೆ. ಹಾಗೆಯೇ ಹದಿಹರೆಯದವರು, ಯುವಕರು ತಮ್ಮ ದೇಹವು ಪ್ರೌಢಾವಸ್ಥೆಗೆ ಬರುವಾಗ ಹಾರ್ಮೋನ್‌ಗಳ ಪ್ರಭಾವದಿಂದ ಸಾಕಷ್ಟು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗೆ ಒಳಗಾಗುತ್ತದೆ. ಇದರಿಂದ ನಿಮ್ಮ ಸಂವಹನ ಕ್ರಿಯೆಯೂ ಬದಲಾಗಬಹುದು.
Advertisement
ಈ ಸಂದರ್ಭದಲ್ಲಿ ನಿಮ್ಮ ಲೈಂಗಿಕ ಆರೋಗ್ಯದ (Sexual Health) ಬಗ್ಗೆ ತಿಳಿವಳಿಕೆ ತುಂಬಾನೆ ಮುಖ್ಯವಾಗುತ್ತದೆ. ಕೆಲವು ತಜ್ಞ ವೈದ್ಯರು ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಲೈಂಗಿಕತೆಯು ಹೇಗೆ ಪರಿಣಾಮ ಬೀರುತ್ತದೆ? ಅನಗತ್ಯ ಗರ್ಭಧಾರಣೆಗಳಿಂದ, ಅನಾರೋಗ್ಯಕರ ಸಂಬಂಧಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು? ಅದಕ್ಕಾಗಿ ಉತ್ತಮ ಲೈಂಗಿಕ ಆರೋಗ್ಯ ಅಭ್ಯಾಸಗಳು ಹೇಗಿರಬೇಕು? ಎನ್ನುವುದರ ಬಗ್ಗೆ ಸಲಹೆ ನೀಡಿದ್ದಾರೆ.ಇದನ್ನೂ ಓದಿ: Exclusive Details- ಯುವರಾಜ್ ಸಿನಿಮಾಗೆ ಮೂರು ಟೈಟಲ್: ‘ಯುವ’ ಫಿಕ್ಸ್ ಆಗಿದ್ದು ಯಾಕೆ?
Advertisement
Advertisement
ನೀವು ಸಂಭೋಗಿಸಲು ಬಯಸಿದ್ರೆ ಅದು ನಿಮ್ಮ ಆಯ್ಕೆಯಾಗಿರುತ್ತದೆ. ಆದರೆ ನೀವು ಲೈಂಗಿಕ ಸಂಬಂಧ ಹೊಂದಲು ನಿರ್ಧರಿಸಿದರೆ ಸುರಕ್ಷಿತ ಅಭ್ಯಾಸಗಳನ್ನು ತಪ್ಪದೇ ಅನುಸರಿಸಬೇಕಾಗುತ್ತದೆ. ಮುಖ್ಯವಾಗಿ…
Advertisement
ಯಾವುದೇ ಲೈಂಗಿಕ ಸಂಬಂಧಕ್ಕೆ ಪ್ರವೇಶಿಸುವ ಮೊದಲು ದೀರ್ಘವಾಗಿ ಯೋಚಿಸಿ. ಏಕೆಂದರೆ ಲೈಂಗಿಕ ಕ್ರಿಯೆಗೆ ಒಮ್ಮೆ ಒಡ್ಡಿಕೊಂಡರೆ ಪದೇ ಪದೇ ಪ್ರಚೋದನೆಗೆ ಒಳಗಾಗಬಹುದು. ಇದನ್ನೂ ಓದಿ: Breaking- ‘ಕಬ್ಜ’ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಬಿಗ್ ಬಿ ಅಮಿತಾಬ್ ಬಚ್ಚನ್
- ಲೈಂಗಿಕತೆಯಿಂದ ಹರಡುವ ರೋಗಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಬೇಕು.
- ಲೈಂಗಿಕತೆಯಿಂದ ಹರಡುವ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕಾಂಡೋಮ್‌ಗಳಂತಹ ಸುರಕ್ಷತೆಯನ್ನು ಯಾವಾಗಲೂ ಬಳಸಬೇಕು.
- ಗರ್ಭಕಂಠದ ಕ್ಯಾನ್ಸರ್ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ.
- ಲೈಂಗಿಕತೆ ಬಯಸುವವರು ಒಬ್ಬರು ಪಾಲುದಾರರನ್ನ ಮಾತ್ರ ಹೊಂದಿರಬೇಕಾಗುತ್ತೆ.
- ಮೊದಲು ಗರ್ಭನಿರೋಧಕ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ. ನಂತರ ಸೂಕ್ತವಾದ ಕ್ರಮ ಅನುಸರಿಸಿ
- ನಿಯಮಿತ ಪ್ಯಾಪ್ ಪರೀಕ್ಷೆಗಳು (ಯಾವುದೇ ಅಸಹಜತೆಯನ್ನು ಪರೀಕ್ಷಿಸಲು ಗರ್ಭಾಶಯದ ಭಾಗವನ್ನು ಪರಿಶೀಲಿಸಲಾಗುತ್ತದೆ), ಶ್ರೋಣಿಯ ಪರೀಕ್ಷೆಗಳು (ಪುರುಷರ ಮೂತ್ರಭಾಗದ ಪರೀಕ್ಷೆ) ಹಾಗೂ ಲೈಂಗಿಕತೆಯ ಆವರ್ತಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
- ಲೈಂಗಿಕ ಕ್ರಿಯೆಗೂ ಮುನ್ನ ನಿಮ್ಮ ಸಂಗಾತಿ ದೇಹದ ಆರೋಗ್ಯದ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಅವರ ಗುಪ್ತಾಂಗಗಳಲ್ಲಿ ನೋವಾಗುತ್ತಿದೆಯೇ ಅಥವಾ ಗುಳ್ಳೆಗಳು ಇವೆಯೇ? ವಿಸರ್ಜನೆಯಾಗುತ್ತಿವೆಯೇ? ಅನ್ನೋದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.
- ಮದ್ಯ ಸೇವನೆ ಮಾಡುವುದು ಹಾಗೂ ಅತಿಯಾದ ಲೈಂಗಿಕತೆಗಾಗಿ ಉದ್ರೇಕಗೊಳಿಸುವ ಮಾತ್ರೆಗಳನ್ನು ಬಳಸೋದನ್ನ ತಪ್ಪಿಸಿ. ಇದರಿಂದ ಅಪಾಯದ ಲೈಂಗಿಕತೆಯಿಂದ ದೂರ ಉಳಿಯಬಹುದು.
- ಆರೋಗ್ಯಕರ ಸಂಬಂಧಕ್ಕಾಗಿ ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಗೌರವದಿಂದ ನಡೆದುಕೊಳ್ಳಿ, ಉತ್ತಮ ಸಂವಹನ ನಡೆಸಿ.
ಸೆಕ್ಸ್ ಏಕೆ ಮುಖ್ಯ?
* ಇದು ಹೆಣ್ಣು-ಗಂಡಿನ ನಡುವೆ ಬಾಂಧವ್ಯ ಬೆಸೆಯುತ್ತದೆ
* ಸಂಗಾತಿಯೊಡೆಗೆ ನಿಮ್ಮ ಪ್ರೀತಿ ಹಾಗೂ ಸೆಳೆತ ಎಷ್ಟಿದೆ ಎಂದು ನಿರ್ಧರಿಸುತ್ತದೆ.
* ಲೈಂಗಿಕ ಅತೃಪ್ತಿಯಿಂದ ದಾಂಪತ್ಯದಲ್ಲಿ ಬಿರುಕುಂಟಾಗುವುದನ್ನು ತಡೆಯುತ್ತದೆ.
* ಸಂಬಂಧದಲ್ಲಿ ಭದ್ರತೆ ಭಾವನೆ ಮೂಡಿಸುತ್ತದೆ
* ಇದು ಮನಸ್ಸು ಹಾಗೂ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ
* ಅಲ್ಲದೆ ಮಗುವನ್ನು ಪಡೆಯಬೇಕೆಂದರೆ ಸೆಕ್ಸ್ ಅತ್ಯವಶ್ಯಕ.
* ಲೈಂಗಿಕ ಆರೋಗ್ಯದಿಂದ ನಿಮ್ಮ ದೈಹಿಕ ಆರೋಗ್ಯ ಸ್ವಾಸ್ಥ್ಯ ಸುರಕ್ಷಿತವಾಗಿರಲಿದೆ.
* ಅನಪೇಕ್ಷಿತ ಗರ್ಭಧಾರಣೆ ತಡೆಯಬಹುದು.