– ತಮಿಳುನಾಡಿಗೆ ನೀರು ಬಿಡ್ತಿರೋದಕ್ಕೆ ಆಕ್ರೋಶ
ಮಂಡ್ಯ: ಒಂದು ಕಡೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ (Tamilnadu) 10 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿಸುತ್ತಿರೋದಕ್ಕೆ ತೀವ್ರ ವಿರೋಧ ವ್ಯಕ್ತವಾಗ್ತಿದೆ. ಈ ನಡುವೆ ಕಾವೇರಿ ನದಿ ನೀರು ಹೆಚ್ಚು ಪ್ರಮಾಣದಲ್ಲಿ ಹರಿಯುತ್ತಿರೋದ್ರಿಂದ ಪ್ರವಾಸಿಗರಲ್ಲಿ ತೀವ್ರ ನಿರಾಸೆ ಮೂಡುತ್ತಿದೆ.
Advertisement
ಹೌದು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‍ಎಸ್ ಡ್ಯಾಂನಿಂದ ಸಂಕಷ್ಟದ ಸೂತ್ರ ಅನುಸರಿಸಿ ತಮಿಳುನಾಡಿಗೆ ನೀರು ಹರಿಸುವ ಬದಲು ರಾಜ್ಯ ಸರ್ಕಾರ ತಮಿಳುನಾಡಿಗೆ ಸದ್ಯ 13 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರು ಹರಿಸುತ್ತಿದೆ. ಇದು ರೈತರಿಗೆ ಹಾಗೂ ಜನರಲ್ಲಿ ಆಕ್ರೋಶವನ್ನು ಉಂಟು ಮಾಡಿದೆ. ಇತ್ತ ಕಾವೇರಿ ನದಿಗೆ ಕಳೆದ ಮೂರು ದಿನಗಳಿಂದ 10 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ತಾತ್ಕಾಲಿಕವಾಗಿ ಬಂದ್ ಆಗಿದೆ.
Advertisement
Advertisement
ಕೆಆರ್‍ಎಸ್ ಡ್ಯಾಂನಿಂದ ಕಾವೇರಿ ನದಿಗೆ 10 ಸಾವಿರಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ರೆ ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ರದ್ದು ಆಗುತ್ತೆ. ಇಲ್ಲಿ ಮೋಟಾರ್ ಬೋಟ್ ಇಲ್ಲದ ಕಾರಣ ಮಾನವ ಚಲಿತ ದೋಣಿಗಳನ್ನು ಬಳಕೆ ಮಾಡಲಾಗುತ್ತದೆ. 10 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ವೇಳೆ ಇಲ್ಲಿ ಸೆಳೆತ ಹೆಚ್ಚಿರುವ ಕಾರಣ ದೋಣಿಯನ್ನು ಚಲಿಸಲು ಕಷ್ಟವಾಗುತ್ತದೆ. ಹೀಗಾಗಿ ದೋಣಿ ವಿಹಾರವನ್ನು ಬಂದ್ ಮಾಡಲಾಗುತ್ತದೆ.
Advertisement
ಪ್ರತಿನಿತ್ಯ ರಂಗನತಿಟ್ಟು ಪಕ್ಷಿಧಾಮಕ್ಕೆ ರಾಜ್ಯವಲ್ಲದೇ ಹೊರ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಇಲ್ಲಿನ ಪಕ್ಷಿ ಸಂಕುಲದ ಜೊತೆಗೆ ಜಲಚರ ಪ್ರಾಣಿಗಳನ್ನು ಬೋಟಿಂಗ್ ಮೂಲಕ ವೀಕ್ಷಣೆ ಮಾಡ್ತಾರೆ. ಆದರೆ ಇದೀಗ ಕಳೆದ ಮೂರು ದಿನಗಳಿಂದ ಬೋಟಿಂಗ್ ನಿಲ್ಲಿಸಿರುವ ಕಾರಣ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ. ಇಲ್ಲಿ ಬರುವ ಬಹುತೇಕ ಪ್ರವಾಸಿಗರು ಬೋಟಿಂಗ್‍ಗೆ ಹೋಗಿ ತಮ್ಮ ಕ್ಯಾಮೆರಾಗಳಲ್ಲಿ ಪಕ್ಷಿಗಳ ಚಲನವಲನವನ್ನು ಸೆರೆ ಹಿಡಿಯಲು ಇಷ್ಟ ಪಡುತ್ತಾರೆ. ಆದರೆ ಇದೀಗ ಈ ಖುಷಿಗೆ ಬ್ರೇಕ್ ಬಿದ್ದ ಹಾಗೆ ಆಗಿದೆ.
ಒಟ್ಟಾರೆ ಒಂದು ಕಡೆ ಕೆಆರ್ ಎಸ್ ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನದಿಯ ಮೂಲಕ 10 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿರೋದು ಒಂದು ಅನ್ನದಾತನ ಆಕ್ರೋಶಕ್ಕೆ ಕಾರಣವಾದ್ರೆ, ಇನ್ನೊಂದೆಡೆ ರಂಗನತಿಟ್ಟಿನಲ್ಲಿನ ಬೋಟಿಂಗ್‍ಗೆ ತಾತ್ಕಾಲಿಕ ಬ್ರೇಕ್ ಬಿದ್ದಿರೋದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ.
Web Stories