ಮುಂಬೈ: ಟೆಂಪೋ ಡ್ರೈವರ್ ಒಬ್ಬ ತನ್ನ ಸಂಬಂಧಿ 100 ರೂ. ನೀಡಲಿಲ್ಲವೆಂದು ಜಗಳವಾಡಿ, ಕತ್ತು ಹಿಸುಕಿ ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಆರೋಪಿ ಟೆಂಪೋ ಚಾಲಕ ಪರಮೇಶ್ವರ್ ಕೊಕಾಟೆ ತನ್ನ ಸಂಬಂಧಿ ರಾಜು ಪಟೇಲ್ ಬಳಿ 100 ರೂ. ಕೇಳಿದ್ದ. ಇದಕ್ಕೆ ನಿರಾಕರಿಸಿದಾಗ ಇಬ್ಬರು ವಾಗ್ವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪರಮೇಶ್ವರ್ ಕೋಪಗೊಂಡು ರಾಜುವಿನ ಕತ್ತು ಹಿಸುಕಿ ತಂತಿಯಿಂದ ಬಿಗಿದು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ರಾಹುಲ್ ಗಾಂಧಿ ಮುಖಕ್ಕೆ ಧ್ವಜವನ್ನು ಎಸೆದ ವ್ಯಕ್ತಿ
ಆರೋಪಿ ತಾನು ಮಾಡಿರುವ ಕೃತ್ಯ ಪೊಲೀಸರಿಗೆ ತಿಳಿಯಬಾರದೆಂದು ಶವವನ್ನು ಕಂಬಳಿಯಲ್ಲಿ ಸುತ್ತಿ ಬೆಂಕಿ ಹಚ್ಚಿದ್ದಾನೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ, ರಾಜು ತನ್ನ ಕಣ್ಣ ಮುಂದೆ ಆತ್ಮಾಹುತಿಗೆ ಯತ್ನಿಸಿದ್ದಾಗಿ ತಿಳಿಸಿದ್ದಾನೆ. ತಕ್ಷಣ ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ರಾಜು ಮೃತನಾಗಿದ್ದ ಎಂದು ಘೋಷಿಸಲಾಗಿತ್ತು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ರಾಜು ಸುಟ್ಟ ಗಾಯಗಳಿಂದ ಅಲ್ಲ ಬದಲಿಗೆ ಕತ್ತು ಹಿಸುಕಿ ಕೊಲ್ಲಲಾಗಿರುವ ಸಂಗತಿ ಪೊಲೀಸರಿಗೆ ತಿಳಿದು ಬಂದಿದೆ. ಇದನ್ನೂ ಓದಿ: ಪತಿ ಸೇವಿಸುವ ಆಹಾರಕ್ಕೆ ಡ್ರಗ್ಸ್ ಸೇರಿಸುತ್ತಿದ್ದ ಪತ್ನಿ ಅರೆಸ್ಟ್
ಆರೋಪಿ ಪರಮೇಶ್ವರ್ ಬಳಿಕ ಪೊಲೀಸರ ಅಥಿತಿಯಾಗಿದ್ದು, 100 ರೂ.ಗಾಗಿ ತನ್ನ ಸಂಬಂಧಿಯನ್ನೇ ಕೊಂದಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ.