ಬೆಂಗಳೂರು: 21ನೇ ಶತಮಾನದ ಅತಿ ದೊಡ್ಡ ಕೇತುಗ್ರಸ್ಥ ಚಂದ್ರಗ್ರಹಣ ಇದೇ ಶುಕ್ರವಾರ ಸಂಭವಿಸಲಿದೆ.
ಗ್ರಹಣ ಅಂದರೆ ಜನರಲ್ಲಿ ಅದೇನೋ ಒಂಥರಾ ಭಯ. ಜನರಲ್ಲಿದ್ದ ಈ ಭಯ ಹೋಗಲಾಡಿಸುವುದಕ್ಕೆ ಬೆಂಗಳೂರಿನ ಪ್ರಮುಖ ದೇವಸ್ಥಾನಗಳಾದ ಕಾಡು ಮಲ್ಲೇಶ್ವರ, ಲಕ್ಷ್ಮೀ ನರಸಿಂಹಸ್ವಾಮಿ, ಗಂಗಮ್ಮ ದೇವಸ್ಥಾನಗಳಲ್ಲಿ ಎಚ್ಚರಿಕೆ ನೋಟಿಸ್ ಅಂಟಿಸಲಾಗಿದೆ. ಇದನ್ನೂ ಓದಿ: ಜುಲೈ 27ರ ಚಂದ್ರಗ್ರಹಣ – ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ?
ದೇವಸ್ಥಾನಗಳು ಗ್ರಹಣ ಶಾಂತಿ ಹೋಮದಲ್ಲಿ ಪಾಲ್ಗೊಳ್ಳಿ, ಗ್ರಹಣದ ಎಫೆಕ್ಟ್ ನಿಂದ ತಪ್ಪಿಸಿಕೊಳ್ಳಿ ಅನ್ನೋ ಸಂದೇಶ ರವಾನೆ ಮಾಡುತ್ತಿವೆ. ಯಾರ್ಯಾರಿಗೆ ಗ್ರಹಣದ ಎಫೆಕ್ಟ್ ಇದೆ. ಏನೇನು ಪರಿಹಾರ ಮಾರ್ಗಗಳಿವೆ ಅನ್ನೋದನ್ನೂ ನೋಟಿಸ್ ನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಕೇತುಗ್ರಸ್ಥ ಚಂದ್ರಗ್ರಹಣದ ವೇಳೆ ಯಾವ ಶ್ಲೋಕ ಜಪಿಸಬೇಕು ಅಂತಲೂ ಮಾಹಿತಿ ನೀಡಿದ್ದಾರೆ.
ಕೃತಿಕ, ರೋಹಿಣಿ, ಶ್ರವಣ, ಆಶ್ಲೇಷ ನಕ್ಷತ್ರದವರಿಗೆ ಹೆಚ್ಚು ಎಫೆಕ್ಟ್ ಇದೆ. ಹಾಗಾಗಿ ಪರಿಹಾರ ಹೋಮಕ್ಕಾಗಿ ಅಕ್ಕಿ, ಗೋಧಿ, ಬೆಲ್ಲ, 3 ತೆಂಗಿನಕಾಯಿ, 3 ನಿಂಬೆ ಹಣ್ಣು, ಎಲೆ ಅಡಿಕೆ, ಮಲ್ಲಿಗೆ ಹೂ, 11 ರೂಪಾಯಿ ನಾಣ್ಯ ತರಬೇಕು. ಉರುಳಿ ಮತ್ತು ಅಕ್ಕಿಯನ್ನ ದಾನ ಮಾಡಿದರೆ ಒಳ್ಳೆಯದು. ಜೊತೆಗೆ ಯಾವ ಶ್ಲೋಕ ಜಪಿಸಬೇಕು ಅಂತಲೂ ಮಾಹಿತಿ ನೀಡಲಾಗಿದೆ.