ಚಾಮರಾಜನಗರ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಚಾಮರಾಜನಗರದ ಬಹುತೇಕ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಪೂಜೆ, ಅಲಂಕಾರಗಳು ನಡೆದವು. ಅದರಲ್ಲೂ ಕೊಳ್ಳೇಗಾಲ ತಾಲೂಕಿನ ಮಧ್ಯ ರಂಗನಾಥಸ್ವಾಮಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
ಸುಮಾರು 150 ಕೆ.ಜಿ.ತೂಕದ ಬೆಣ್ಣೆಯಿಂದ ಮಧ್ಯ ರಂಗನಾಥಸ್ವಾಮಿಗೆ ಅಲಂಕಾರ ಮಾಡಲಾಗಿತ್ತು. ಬೆಣ್ಣೆಯಲ್ಲಿ ಅಲಂಕಾರವಾಗಿದ್ದ ರಂಗನಾಥಸ್ವಾಮಿಯನ್ನು ನೋಡಲು ಸಾವಿರಾರು ಭಕ್ತರು ಬಂದಿದ್ದು, ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೇ ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತೆ ಎಂದು ಭಾವಿಸಿರೋ ಅಪಾರ ಭಕ್ತ ಸಮೂಹ ಸ್ವಾಮಿಯ ದರ್ಶನ ಪಡೆದರು.
Advertisement
ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಅಂತ್ಯರಂಗನನ್ನು ಒಂದೇ ದಿನ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅಪಾರ ಭಕ್ತ ಸಮೂಹವೇ ಬೆಳಗ್ಗೆಯಿಂದಲೇ ದೇವರ ದರ್ಶನ ಪಡೆಯುತ್ತಿದ್ದಾರೆ. ಅದಲ್ಲರೂ ಬೆಣ್ಣೆ ಅಲಂಕಾರದಲ್ಲಿ ಮಧ್ಯ ರಂಗನಾಥಸ್ವಾಮಿ ಕಂಗೊಳಿಸುತ್ತಿದುದ್ದು ವಿಶೇಷವಾಗಿತ್ತು.