ಬೆಂಗಳೂರು: ದೇವಾಲಯದ ಮುಂಭಾಗದಲ್ಲಿಯೇ ಶೌಚಾಲಯ ನಿರ್ಮಿಸಲು ಅಧ್ಯಕ್ಷರು ಮುಂದಾಗಿದ್ದು, ಇದರಿಂದ ಭಕ್ತರು ಆಕ್ರೋಶಗೊಂಡಿದ್ದಾರೆ.
200 ವರ್ಷಗಳ ಚಿಕ್ಕಪೇಟೆಯ ಉತ್ತರಾದಿ ಮಠದಲ್ಲಿರುವ ಆಂಜನೇಯ ದೇವಾಲಯದ ಮುಂದೆ ಪೇ ಅಂಡ್ ಯೂಸ್ ಟಾಯ್ಲೆಟ್ ನಿರ್ಮಿಸಲು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಹೊರಟಿದ್ದಾರೆ. ಇದು 200 ವರ್ಷ ಪುರಾತನವಾದ ಚಿಕ್ಕಪೇಟೆಯ ಉತ್ತರಾದಿ ಮಠ. ಚಿಕ್ಕ ಪೇಟೆಯ ವ್ಯಾಪಾರಿಗಳೆಲ್ಲ ಬೆಳಗೆದ್ದು ಈ ಹನುಮನಿಗೆ ಒಂದು ನಮಸ್ಕಾರ ಮಾಡಿ ಅಂಗಡಿಗಳನ್ನ ಓಪನ್ ಮಾಡುತ್ತಾರೆ. ಈ ಮಠದ ಎದುರು 98 ಲಕ್ಷ ವೆಚ್ಚದಲ್ಲಿ ಫೇ ಆಂಡ್ ಯೂಸ್ ಟಾಯ್ಲೆಟ್ ನಿರ್ಮಿಸಲು ಕೆಪಿಸಿಸಿ ಅಧ್ಯಕ್ಷರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಈ ಶೌಚಾಲಯ ಮೊದಲು ರಾಘವೇಂದ್ರ ದೇವಸ್ಥಾನದ ಪಕ್ಕದಲ್ಲೆ ಇತ್ತು. ಆದರೆ ಈಗ ಹಳೆ ಶೌಚಾಲಯ ಒಡೆದು ಹಾಕಿ ಹೊಸ ಶೌಚಾಲಯವನ್ನ ಹನುಮನ ಎದುರೇ ನಿರ್ಮಿಸುತ್ತಿದ್ದಾರೆ. ಆದ್ದರಿಂದ ದೇವಾಲಯದ ಮುಂದೆ ಶೌಚಾಲಯ ನಿರ್ಮಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ಈ ಕಾಮಗಾರಿ ಆರಂಭಿಸುವ ಮುನ್ನವೇ ದೇವಸ್ಥಾನ ಎದುರಿಗೆ ಶೌಚಲಯ ನಿರ್ಮಾಣ ಮಾಡುವುದು ಬೇಡ ಭಕ್ತರಿಗೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಮಹಿಳೆಯರು ದೇವಸ್ಥಾನಕ್ಕೆ ಬರುವುದಕ್ಕೆ ಮುಜುಗರ ಪಟ್ಟುಕೊಳ್ಳುತ್ತಾರೆ ಅಂತ ಹೇಳಿದ್ದಾರೆ. ಆದರೆ ಗುಂಡುರಾವ್ ಮಾತ್ರ ಭಕ್ತರು ಮತ್ತು ಮಠದ ಮಾತಿಗೆ ಕ್ಯಾರೆ ಎನ್ನದೆ ಕಾಮಗಾರಿ ಆರಂಭಸಿದ್ದಾರೆ ಅಂತ ಮಾಜಿ ಕಾರ್ಪೋರೇಟರ್ ಶಿವಕುಮಾರ್ ಆರೋಪಿಸಿದ್ದಾರೆ.
Advertisement
ಈ ವಿಚಾರವಾಗಿ ಸ್ಥಳೀಯರು ಮತ್ತು ಮಠದವರು, ದಿನೇಶ್ ಗುಂಡುರಾವ್ ಹಾಗೂ ಬಿಬಿಎಂಪಿಯ ಮೇಯರ್ ಸಂಪತ್ ರಾಜ್, ಕಮೀಷನರ್ ಮಂಜುನಾಥ್ ಪ್ರಸಾದ್ ಗೆ ಪತ್ರ ಕೊಟ್ಟಿದ್ದಾರೆ. ಆದರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳಿಯರು ತಮ್ಮ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.