ನೆಲಮಂಗಲ: ದೇವರೇ ಒಳ್ಳೆಯದು ಮಾಡಪ್ಪ ಎಂದು ದೇವರಿಗೆ ಕೈ ಮುಗಿದು ಬೇಡಿಕೊಳ್ಳುವ ಭಕ್ತರನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಳ್ಳರ ಕೂಟ ವಿನೂತನವಾಗಿ ದೇವರಲ್ಲಿ ನಾನೊಬ್ಬ ಕಳ್ಳ ಕಾಪಾಡು ಮಾರಮ್ಮ ಎಂದು ಪೂಜೆ ನೆರವೇರಿಸಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಮಾರಮ್ಮ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಕಳ್ಳತನಕ್ಕೆ ಬಂದ ಇಬ್ಬರು ಕಳ್ಳರು ದೇವಾಲಯದ ಹುಂಡಿ ಕದಿಯುವ ಮೊದಲು ಓರ್ವ ತಪ್ಪಾಯಿತು ಎಂದು ಪ್ರಾರ್ಥನೆ ಸಲ್ಲಿಸಿ, ದೇವಾಲಯದಲ್ಲಿ ಇದ್ದ ಕಾಣಿಕೆ ಹುಂಡಿಯನ್ನು ನಂತರ ಪ್ಲಾಸ್ಟಿಕ್ ಚೀಲ ಹೊದಿಸಿ ಕದ್ದು ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ವ್ಯಕ್ತಿ ಹೊಟ್ಟೆಯಲ್ಲಿ 1ಕೆ.ಜಿ ಮೊಳೆ, ಬೋಲ್ಟ್, ಸ್ಕ್ರೂ ನೋಡಿ ವೈದ್ಯರು ಶಾಕ್
ಸದ್ಯ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರಯಾಗಿದ್ದು, ದಾಬಸ್ ಪೇಟೆ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು