ಗದಗ: ದೇವಸ್ಥಾನಗಳಿಗೆ ಕನ್ನ ಹಾಕಿ ದೇವರುಗಳ ಮೂರ್ತಿ ಹಾಗೂ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಜಿಲ್ಲೆಯ ರೋಣ ಪೊಲೀಸರು ಬಂಧಿಸಿದ್ದಾರೆ.
Advertisement
ಕಳೆದ ಆಗಸ್ಟ್ 5 ಮತ್ತು 6 ರಂದು ಜಿಲ್ಲೆ ರೋಣ ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನ ಹಾಗೂ ಬೆಳವಣಿಕಿ ಗ್ರಾಮದೇವತೆ ಕನ್ನಿಕಾ ಪರಮೇಶ್ವರಿ ದೇವಸ್ಥಾನಗಳಲ್ಲಿ ಸರಣಿ ಕಳ್ಳತನವಾಗಿತ್ತು. ಈ ಎರಡೂ ಕಳ್ಳತನವನ್ನು ಆರೋಪಿ ಸುಭಾಷ್ ಹರಣಶಿಕಾರಿ ಮಾಡಿದ್ದ ಎನ್ನಲಾಗುತ್ತಿದೆ. ಇದನ್ನೂ ಓದಿ: ಪೊಲೀಸ್ ಠಾಣೆ ಮುಂದೆಯೇ ಯುವಕನ ಮೇಲೆ ಹಲ್ಲೆ – 6 ಜನರ ಬಂಧನ
Advertisement
ಖದೀಮ ಸುಭಾಷ್ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ನಿವಾಸಿ ಎನ್ನಲಾಗುತ್ತಿದೆ. ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಅದೂ ದೊಡ್ಡ ದೇವಸ್ಥಾನಗಳಿಗೆ ಕನ್ನ ಹಾಕುತ್ತಿದ್ದ ಎನ್ನಲಾಗುತ್ತಿದೆ. ಹೀಗಾಗಿಯೇ ರೋಣ ವೀರಭದ್ರೇಶ್ವರನ ಬೆಳ್ಳಿ ಕೀರಿಟ, ಮೂರ್ತಿ, 4 ಅಡಿ 2 ಬೆತ್ತ ಹಾಗೂ ಕನ್ನಿಕಾ ಪರಮೇಶ್ವರಿಯ ಚಿನ್ನದ ಆಭರಣಗಳು, ಪೂಜೆಯ ಹಿತ್ತಾಳೆ, ತಾಮ್ರದ ಸಾಮಗ್ರಿಗಳು ಸೇರಿದಂತೆ ಸುಮಾರು 2 ಲಕ್ಷ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದ.
Advertisement
Advertisement
ಈ ಬಗ್ಗೆ ರೋಣ ಸಿ.ಪಿ.ಐ ನೇತೃತ್ವದ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ಸದ್ಯ ಆರೋಪಿಯನ್ನು ರೋಣ ಪೊಲೀಸರು ಬಂಧಿಸಿದ್ದಾರೆ. ಆದರೆ ಇವನ ಹಿಂದೆ ಇನ್ನಷ್ಟು ಜನ ಇರುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತೀಶ್.ಎನ್ ತಿಳಿಸಿದ್ದಾರೆ.