ChamarajanagarDistrictsKarnatakaLatestMain Post

ಪೂಜೆ ಮಾಡಿಕೊಂಡು ಹೋಗು ಅಂದ್ರೆ ದೇವಾಲಯವೇ ತನ್ನದೆಂದ ಪೂಜಾರಿ – ಗ್ರಾಮಸ್ಥರಿಂದ ಪ್ರತಿಭಟನೆ

ಚಾಮರಾಜನಗರ: ಪೂಜೆ ಮಾಡಿಕೊಂಡು ಹೋಗಪ್ಪ ಎಂದು ಗ್ರಾಮಸ್ಥರು ಪೂಜಾರಿಯೊಬ್ಬರಿಗೆ ಅವಕಾಶ ಮಾಡಿಕೊಟ್ಟರೆ ಪೂಜಾರಿ ದೇವಸ್ಥಾನವೇ ತನ್ನದೆಂದು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಕಣ್ಣೇಗಾಲ ಗ್ರಾಮದಲ್ಲಿ ನಡೆದಿದೆ.

ಪೂಜಾರಿ ದೊಡ್ಡಯ್ಯ ಎಂಬವರು ಪ್ರತಿದಿನ ಗ್ರಾಮದ ದೊಡ್ಡಯ್ಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸುತ್ತಿದ್ದರು. ಇದೀಗ ಪೂಜೆ ಮಾಡುವ ದೇವಸ್ಥಾನವನ್ನೆ ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಮುಂದಾಗಿದ್ದು, ತನ್ನ ಹೆಸರಿಗೆ ಸ್ವತ್ತು ನೀಡುವಂತೆ ಗ್ರಾಮಪಂಚಾಯತ್‍ಗೆ ಅರ್ಜಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆಗೆ ಮಾಡಿದ್ದಾರೆ. ಇದನ್ನೂ ಓದಿ: ಹೆಂಡತಿಯೊಂದಿಗೆ ಜಗಳ ವಿಷ ಕುಡಿದೆ ಎಂದು ಪೊಲೀಸರಿಗೆ ಪತಿರಾಯನ ಕರೆ

ದೊಡ್ಡಯ್ಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಹೋಗುವಂತೆ ತಹಶೀಲ್ದಾರ್ ಕೆಲವರ್ಷಗಳ ಹಿಂದೆ ಸೂಚಿಸಿದ್ದರು. ಹಾಗಾಗಿ ಅಲ್ಲಿ ಪೂಜೆ ಮಾಡಿಕೊಂಡಿದ್ದ ದೊಡ್ಡಯ್ಯ ಈಗ ದೇವಸ್ಥಾನ ತನ್ನ ಆಸ್ತಿ ಎನ್ನುತ್ತಿದ್ದು, ದೇವಸ್ಥಾನ ಸಾರ್ವಜನಿಕ ಸ್ವತ್ತಾಗಿದ್ದು ಇದನ್ನು ಟ್ರಸ್ಟ್ ಗೆ ವಹಿಸಿಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಾರಿಯಲ್ಲಿ ಸಿಕ್ಕಿದ್ದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾ.ಪಂ ಸದಸ್ಯ

Leave a Reply

Your email address will not be published.

Back to top button