ಬೆಂಗಳೂರು: ರಾಜ್ಯದ ಪ್ರಮುಖ ಮುಜರಾಯಿ ದೇಗುಲದಲ್ಲಿ ಇನ್ನೂ ಮುಂದೆ ವಸ್ತ್ರ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ.
ಜೀನ್ಸ್, ಟೀ ಶರ್ಟ್ ಧರಿಸಿದರೆ ದೇವರ ದರ್ಶನ ಸಿಗುವುದು ಅನುಮಾನವಾಗಿದೆ. ಮುಜರಾಯಿ ಇಲಾಖೆ ಸಚಿವರು ಈ ಸಂಬಂಧ ಸಭೆ ಕರೆಯಲ್ಲಿದ್ದು, ಶೀಘ್ರದಲ್ಲಿಯೇ ವಸ್ತ್ರ ಸಂಹಿತೆ ಯಾವ ರೀತಿ ಇರಬೇಕು ಎನ್ನುವ ನಿಯಮವನ್ನು ರೂಪಿಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಲಿದೆ: ವಿಎಚ್‍ಪಿ
Advertisement
Advertisement
ಈಗಾಗಲೇ ಕುಕ್ಕೆಯಿಂದ ಮನವಿ ಕೂಡ ಮಾಡಲಾಗಿದ್ದು, ಭಕ್ತಾದಿಗಳು ದೇವರ ದರ್ಶನಕ್ಕೆ ಬರುವಾಗ ತುಂಡು ಬಟ್ಟೆ ಜೀನ್ಸ್, ಟೀ ಶರ್ಟ್ ಧರಿಸಿ ಬರುತ್ತಿದ್ದಾರೆ. ವಸ್ತ್ರ ಸಂಹಿತೆ ಜಾರಿ ಮಾಡಿ ಎಂದು ಇಲಾಖೆಗೆ ಮನವಿ ಕೂಡ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೆ ಮುಜರಾಯಿ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತಿಸಿದೆ.
Advertisement
ಮಹಿಳೆಯರಿಗೆ ಕುರ್ತಾ, ಸೀರೆ ಅಥವಾ ಸಲ್ವಾರ್ ಹಾಗೂ ಪುರುಷರಿಗೆ ಪಂಚೆ, ಶರ್ಟ್ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಮಂಗಳವಾರ ಬಹುತೇಕ ವಿಧಾನಸೌಧದಲ್ಲಿ ಸಚಿವರ ಸಭೆ ನಡೆಯಲಿದ್ದು, ತೀರ್ಮಾನ ತೆಗೆದುಕೊಳ್ಳಲಿದ್ದಾರೆ.