ವಿಲ್ಲುಪುರಂ: ವೈಕಾಸಿ ಹಬ್ಬದ ವೇಳೆ ದಲಿತರನ್ನ (Dalits) ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದೆ ತಾರತಮ್ಯ ಎಸಲಾಗಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನಲೆ ತಮಿಳುನಾಡಿನ (Tamil Nadu) ವಿಲ್ಲುಪುರಂ (Villupuram) ಜಿಲ್ಲೆಯ ವೀರನಂಪಟ್ಟಿಯ ಕಾಳಿಯಮ್ಮನ ದೇವಸ್ಥಾನವನ್ನು (Kaliamman Temple) ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಕಾಳಿಯಮ್ಮನ್ ದೇವಾಲಯವು ಈ ಭಾಗದಲ್ಲಿ ಪ್ರಸಿದ್ದಿಯಾಗಿದ್ದು, ಇಲ್ಲಿ ಕಾಳಿ ದೇವಿಯ ಮರದ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ದೇವಾಲಯವು ಪ್ರತಿ ವರ್ಷ ತಮಿಳುನಾಡು ಮತ್ತು ಪುದುಚೇರಿಯ ಭಕ್ತರನ್ನು ಆಕರ್ಷಿಸುತ್ತದೆ. ಈ ವರ್ಷ ವೈಕಾಸಿ ಹಬ್ಬದ ಪ್ರಯುಕ್ತ ಸುತ್ತಲಿನ ಎಂಟು ಗ್ರಾಮಗಳ ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ರಾಹುಲ್ ಮೊಹಬ್ಬತ್ ಹಿಂದೂ ಜೀವನ ಶೈಲಿಯನ್ನು ಖಂಡಿಸುತ್ತದೆಯೇ? : ಸ್ಮೃತಿ ಇರಾನಿ
Advertisement
Advertisement
ಈ ಭಾಗದಲ್ಲಿ 80 ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದ್ದು, ಈ ಪೈಕಿ ಕೆಲವು ಕುಟುಂಬಗಳು ದೇವಸ್ಥಾನದಲ್ಲಿ ನಮಗೆ ನಿರಂತರವಾಗಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಮತ್ತು ವೈಕಾಶಿ ಉತ್ಸವದಲ್ಲಿ ಭಾಗವಹಿಸಲು ಸಹ ಅನುಮತಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿವೆ. ತಾರತಮ್ಯ ಎಸಗುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.
Advertisement
ಪ್ರತಿಭಟನೆ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಕಡವೂರು ತಹಶಿಲ್ದಾರ್ ಮುನಿರಾಜ್ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿದರು. ಸೌಹಾರ್ದಯುತ ಮಾತುಕತೆಗೆ ಒಪ್ಪದ ಹಿನ್ನಲೆ ಪರಿಹಾರ ಸಿಗುವವರೆಗೆ ದೇವಸ್ಥಾನವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಘೋಷಿಸಲಾಗಿದೆ. ದೇವಸ್ಥಾನ ಯಾವಾಗ ತೆರೆಯಬಹುದು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಇದನ್ನೂ ಓದಿ: 500 ರೂ. ನೋಟ್ ಬ್ಯಾನ್ ಮಾಡಲ್ಲ – 1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI
Advertisement
ಕಳೆದ ಎಪ್ರಿಲ್‌ನಿಂದ ಪ್ರಬಲ ಜಾತಿ ಮತ್ತು ದಲಿತರ ನಡುವೆ ಜಗಳ ಹೆಚ್ಚುತ್ತಿದ್ದು, ತಮ್ಮ ಮೇಲೆ ಶೋಷಣೆಯಾಗುತ್ತಿದೆ ಎಂದು ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳು ಆರೋಪಿಸುತ್ತಿವೆ.