ಭೋಪಾಲ್: ರಾಮನವಮಿ (Ram Navami) ಆಚರಣೆ ವೇಳೆ ದೇವಾಲಯವೊಂದರ (Temple) ನೆಲ ಕುಸಿತವಾಗಿದ್ದು, ಅದರ ಅಡಿಯಲ್ಲಿದ್ದ ಬಾವಿಗೆ ಸುಮಾರು 25 ಜನರು ಬಿದ್ದಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ (Indore) ನಡೆದಿದೆ. ಬಾವಿಗೆ ಬಿದ್ದಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸ್ನೇಹನಗರ ಪ್ರದೇಶದಲ್ಲಿರುವ ಬಾಲೇಶ್ವರ ದೇವಾಲಯದಲ್ಲಿ ಈ ಘಟನೆ ವರದಿಯಾಗಿದೆ. ಘಟನೆಯ ಬಳಿಕ ದೇವಾಲಯದ ಆವರಣದಲ್ಲಿ ಉಂಟಾದ ಅವ್ಯವಸ್ಥೆಯ ಹಾಗೂ ರಕ್ಷಣಾ ಕಾರ್ಯಾಚರಣೆಯ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಇದನ್ನೂ ಓದಿ: ವಾಹನ ಸವಾರನ ಮೇಲೆ ಎಕ್ಸ್‌ಪ್ರೆಸ್ ವೇ ಟೋಲ್ ಸಿಬ್ಬಂದಿ ಹಲ್ಲೆ
Advertisement
#WATCH | Madhya Pradesh: Many feared being trapped after a stepwell at a temple collapsed in Patel Nagar area in Indore.
Details awaited. pic.twitter.com/qfs69VrGa9
— ANI MP/CG/Rajasthan (@ANI_MP_CG_RJ) March 30, 2023
Advertisement
ವರದಿಗಳ ಪ್ರಕಾರ ದೇವಾಲಯದ ಆವರಣದಲ್ಲಿ ಮೆಟ್ಟಿಲು ಬಾವಿಯಿದ್ದು, ಅದಕ್ಕೆ ಮೇಲ್ಛಾವಣಿ ಹಾಕಿ ಮುಚ್ಚಲಾಗಿತ್ತು. ರಾಮನವಮಿಯ ಹಿನ್ನೆಲೆ ದೇವಾಲಯದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಮೆಟ್ಟಿಲು ಬಾವಿಯ (Stepwell) ಮೇಲ್ಛಾವಣಿ ಕುಸಿದಿದೆ. ಇದರಿಂದ ಅದರ ಮೇಲೆ ನಿಂತಿದ್ದ ಸುಮಾರು 25 ಜನರು ಬಾವಿಯೊಳಗೆ ಬಿದ್ದಿದ್ದಾರೆ.
Advertisement
ಇದೀಗ ಬಾವಿಯೊಳಗೆ ಬಿದ್ದಿರುವವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಕುಸಿತದ ಸಂದರ್ಭ ಸ್ಥಳದಲ್ಲಿ 25ಕ್ಕೂ ಹೆಚ್ಚು ಜನರಿದ್ದರು ಎನ್ನಲಾಗಿದೆ. ಆದರೆ ಘಟನೆ ಬಗ್ಗೆ ಅಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರೂ ಅವರು ಸರಿಯಾದ ಸಮಯದಲ್ಲಿ ಆಗಮಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಬಾವಿಯೊಳಗೆ ಹಗ್ಗಗಳನ್ನು ಬಿಟ್ಟು ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಪೋಸ್ಟರ್ ವಾರ್ – ಪ್ರಧಾನಿ ಶೈಕ್ಷಣಿಕ ಅರ್ಹತೆ ಕೆಣಕಿದ AAP