ರಾಯಚೂರು: ದೇವಸ್ಥಾನದ (Temple) ಪೂಜೆಗಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ಕೊನೆಗೆ ಪೊಲೀಸರು (Police) ದೇವರಿಗೆ ಪೂಜೆ ಮಾಡಿದ ಘಟನೆ ರಾಯಚೂರಿನಲ್ಲಿ (Raichur) ನಡೆದಿದೆ.
Advertisement
ನಗರದ ಎಲ್‍ಬಿಎಸ್ ಬಾಲ ವೀರಾಂಜನೇಯಾ ಸ್ವಾಮಿ ದೇವಾಲಯದ ಪೂಜೆ ವಿಷಯಕ್ಕೆ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ದೇವಾಲಯ ನಿರ್ವಹಣೆ ಮಾಡುತ್ತಿದ್ದ ಓಂಕಾರ ಗೌಡ ಗರ್ಭಗುಡಿ ಹಾಗೂ ಗೇಟ್‍ಗೆ ಬೀಗಹಾಕಿದ್ದ. ಶನಿವಾರ ಪೂಜೆ, ಪ್ರಾರ್ಥನೆಗೆ ಬಂದ ಭಕ್ತರಿಗೆ ದರ್ಶನ ಸಿಗದೆ ಹೊರಗಡೆ ಕಾಯುತ್ತಿದ್ದರು. ಬೀಗ ತೆರೆಯುವ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿ ಹೊಡದಾಡುವ ಹಂತಕ್ಕೇರಿದೆ. ಇದನ್ನೂ ಓದಿ: ಡ್ಯಾನ್ಸ್ ಮಾಡ್ಬೇಕು ಸಾಂಗ್ ಹಾಕಿ ಅಂದಿದ್ದೆ ತಪ್ಪಾ? – ದಲಿತ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು
Advertisement
Advertisement
ಪೊಲೀಸ್ ಮಧ್ಯಪ್ರವೇಶ ಬಳಿಕವೂ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಹೀಗಾಗಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಸ್ವತಃ ತಾವೇ ಬೀಗ ಹೊಡೆದು, ಆಂಜನೇಯ ಸ್ವಾಮಿಗೆ ಪೂಜೆ ಮಾಡಿದ್ದಾರೆ. ಪೊಲೀಸರು ಪೂಜೆ ಮಾಡಿದ ಬಳಿಕ ಭಕ್ತರು ದೇವಾಲಯ ಒಳಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಘಟನೆಯಲ್ಲಿ ನಗರಸಭೆ ಸದಸ್ಯ ತಿಮ್ಮಾರೆಡ್ಡಿ, ಜನಾರ್ದನ ರೆಡ್ಡಿ, ಸಂಜೀವ ರೆಡ್ಡಿ ಎಂಬುವವರು ಹಲ್ಲೆ ಮಾಡಿರುವುದಾಗಿ ಗಾಯಾಳು ಓಂಕಾರ ಗೌಡ ಆರೋಪಿಸಿದ್ದಾನೆ. ಹೊಡೆದಾಟದಲ್ಲಿ ನಾಲ್ಕೈದು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಸ್ವಂತ ಜಾಗದಲ್ಲಿ ಕಟ್ತೀವಿ ಅಂದ್ರೂ ಬಿಡಲ್ಲ, ಬಾಬ್ರಿ ಮಸೀದಿ ರೀತಿ ಧ್ವಂಸ ಮಾಡ್ತೇವೆ – ಮುತಾಲಿಕ್
Advertisement
Live Tv
[brid partner=56869869 player=32851 video=960834 autoplay=true]