ಬೆಂಗಳೂರು: ಮಕ್ಕಳನ್ನ ಎತ್ತಿಕೊಂಡು ದೇವಸ್ಥಾನಕ್ಕೆ ಹೋಗುವವರೇ ಹುಷರಾಗಿರಿ. ಯಾಕೆಂದರೆ ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುವ ಕಳ್ಳಿಯರು ಸಿಲಿಕಾನ್ ಸಿಟಿಯಲ್ಲಿ ಇದ್ದಾರೆ.
ಉಮಾ (45)ಅಲಿಯಾಸ್ ನಾಗಮ್ಮ ಬಂಧಿತ ಆರೋಪಿ. ಈಕೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬನಶಂಕರಿ ದೇವಸ್ಥಾನವನ್ನೇ ಟಾರ್ಗೆಟ್ ಮಾಡಿಕೊಂಡಿದ್ದಳು. ಅದರಲ್ಲೂ ಮಂಗಳವಾರ ಮತ್ತು ಶುಕ್ರವಾರದಂದೇ ದೇವಾಲಯದಲ್ಲಿ ತನ್ನ ಕೈಚಳಕ ತೋರಿಸುತ್ತಿದ್ದಳು. ಈಗ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸರಿಂದ ಕಳ್ಳಿಯ ಬಂಧನವಾಗಿದೆ.
ಇಬ್ಬರು ಗರ್ಭಿಣಿ ಪೇದೆಗಳು ಸೇರಿದಂತೆ ಒಟ್ಟು 6 ಮಹಿಳಾ ಪೇದೆಗಳಿಂದ ಕಳ್ಳಿ ಉಮಾಳ ಬಂಧನವಾಗಿದೆ. ಉಮಾ ಕಳೆದ ಒಂದು ತಿಂಗಳಿಂದ ಬನಶಂಕರಿ ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತಿದ್ದಳು. ಅದರಲ್ಲೂ ದೇವಸ್ಥಾನಕ್ಕೆ ಬರುವ ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಪೋಷಕರು ಮಕ್ಕಳನ್ನ ಎತ್ತಿಕೊಂಡಿರುವ ವೇಳೆ ಮಕ್ಕಳ ಮೈಮೇಲಿನ ಚಿನ್ನಾಭರಣಗಳನ್ನ ಕಳ್ಳತನ ಮಾಡುತ್ತಿದ್ದಳು.
ಮಂಗಳವಾರ, ಶುಕ್ರವಾರ ದೇವಸ್ಥಾನಕ್ಕೆ ಬಹಳಷ್ಟು ಜನ ಬರುವುದರಿಂದ ಆ ಎರಡು ದಿನ ಮಾತ್ರ ಕಳ್ಳತನ ಮಾಡುತ್ತಿದ್ದಳು. ಕಳ್ಳಿ ಉಮಾಳ ಕೈಚಳಕ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಕುಮಾರಸ್ವಾಮಿ ಲೇಔಟ್ ಮಹಿಳಾ ಪೇದೆಯರು ಮಫ್ತಿಯಲ್ಲಿ ಆರೋಪಿಗೆ ಹೊಂಚು ಹಾಕಿದ್ದರು. ಅದೇ ರೀತಿ ಕಳ್ಳಿ ಉಮಾಳ ಕೈ ಚಳಕದ ವೇಳೆ ಮಹಿಳಾ ಪೇದೆಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಸದ್ಯಕ್ಕೆ ಕಳ್ಳಿಯನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕಳ್ಳಿ ಉಮಾ ಕಳ್ಳತನ ಮಾಡುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews