ರಾಯಚೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಇದೀಗ ರಾಜ್ಯದ ಕೆಲವು ಜಿಲ್ಲೆಗಳು ಗರಿಷ್ಠ ತಾಪಮಾನದ ಗಡಿಯನ್ನು ದಾಟಿದೆ.ಇದನ್ನೂ ಓದಿ: ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ: ಹಿಂದೂ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿವಾದದ ಮಾತು
ಹೌದು, ಕಳೆದ 24 ಗಂಟೆಗಳಲ್ಲಿ ರಾಜ್ಯದ 6 ಜಿಲ್ಲೆಗಳು 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಡಿದಾಟಿದೆ. ಈ ಪೈಕಿ ಬಿಸಿಲನಾಡು ರಾಯಚೂರು ಅಗ್ರ ಸ್ಥಾನದಲ್ಲಿದ್ದು, 41.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತಾಪಮಾನ ಹೆಚ್ಚಳದಿಂದಾಗಿ ಜಿಲ್ಲೆಯ ಜನ ಕಂಗಾಲಾಗಿದ್ದು, ಕನಿಷ್ಠ ತಾಪಮಾನ ಏರಿಕೆಯಾಗಿರುವುದು ತಲೆ ಸುಡುವಂತೆ ಮಾಡಿದೆ.
ರಾಯಚೂರು ಬಳಿಕ ಕೊಪ್ಪಳ 40.7 ಡಿಗ್ರಿ, ಉತ್ತರಕನ್ನಡ ಮತ್ತು ಧಾರವಾಡದಲ್ಲಿ 40.5 ಡಿಗ್ರಿ, ಕಲಬುರಗಿ 40.4 ಡಿಗ್ರಿ ಹಾಗೂ ಬಾಗಲಕೋಟೆಯಲ್ಲಿ 40.1 ಡಿಗ್ರಿ ತಾಪಮಾನ ದಾಖಲಾಗಿದೆ. ರಾಯಚೂರು ತಾಪಮಾನದಲ್ಲಿ ದಾಖಲೆಯತ್ತ ಮುನ್ನುಗ್ಗುತ್ತಿದೆ.ಇದನ್ನೂ ಓದಿ: ಬಾಗಲಕೋಟೆ | ಕುರಿ ಕಳ್ಳರನ್ನ ಹಿಡಿಯಲು ಹೋದ ವ್ಯಕ್ತಿಯ ಕೊಲೆ – ಆರೋಪಿಗಳು ಅರೆಸ್ಟ್