ತೆಲುಗಿನ ಖ್ಯಾತ ಹಾಸ್ಯನಟ ವೇಣು ಮಾಧವ್ ಇನ್ನಿಲ್ಲ

Public TV
1 Min Read
venu

ಹೈದರಾಬಾದ್: ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ವೇಣು ಮಾಧವ್(39) ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ.

ವೇಣು ಮಾಧವ್ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಸಿಕಂದರಬಾದ್‍ ನಲ್ಲಿರುವ ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

newpg jaichiranjeeva2

ವೇಣು ಮಾಧವ್ ಅವರು ಯಕೃತ್ತು ತೀವ್ರ ಹಾನಿಗೆ ಒಳಗಾಗಿತ್ತು. ಹೀಗಾಗಿ ಅವರಿಗೆ ಯಕೃತ್ ಕಸಿ ಮಾಡುವ ಅವಶ್ಯಕತೆ ಇತ್ತು. ಆದರೆ ವೇಣು ಮಾಧವ್ ಸ್ಥಿತಿ ತೀವ್ರ ಚಿಂತಾಜನಕವಾಗಿದ್ದು, ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇವರು ತೆಲುಗು, ತಮಿಳು ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದುವರೆಗೂ 170ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟ ಚಿರಂಜೀವಿ, ಪ್ರಭಾಸ್, ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಮತ್ತು ಮಹೇಶ್ ಬಾಬು ಸೇರಿದಂತೆ ಅನೇಕ ಮೇರು ನಟರ ಜೊತೆ ನಟಿಸಿದ್ದರು.

Venumadhav Death News 1

ಕಡಪ ಜಿಲ್ಲೆಯ ಸೂರ್ಯ ಪೇಟೆ ವೇಣು ಮಾಧವ್ ಅವರ ಹುಟ್ಟೂರು. ಮಿಮಿಕ್ರಿ ನಟನಾಗಿದ್ದ ವೇಣು ಮಾಧವ್ ಅವರು 1996 ರಲ್ಲಿ ಸಿನಿಮಾರಂಗ ಪ್ರವೇಶಿಸಿದ್ದರು. ಕೊನೆಯದಾಗಿ 2016 ರಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈಗ ವೇಣು ಮಾಧವ್ ಪತ್ನಿ ಶ್ರೀ ವಾಣಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *