ನಿರ್ದೇಶಕರಿಗೆ ನಾನು ಸಂಪೂರ್ಣ ಶರಣಾಗ್ತೇನೆ – ಕೇತಿಕಾ ಶರ್ಮಾ ಹೀಗೆ ಹೇಳಿದ್ದೇಕೆ ಗೊತ್ತಾ?

Public TV
2 Min Read
KETIKA SHARMA

ನಾನು ನಿರ್ದೇಶಕರಿಗೆ ಸಂಪೂರ್ಣ ಶರಣಾಗುತ್ತೇನೆ, ಅವರು ಹೇಳಿದಂತೆಯೇ ಕೇಳುತ್ತೇನೆ ಎಂದು ತೆಲಗು ನಟಿ (Telugu Actress) ಕೇತಿಕಾ ಶರ್ಮಾ (Ketika Sharma) ಹೇಳಿದ್ದಾರೆ. ‘ಸಿಂಗಲ್’ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾಗ ಮಾಧ್ಯಮಗಳು ಅವರ `ಅಧಿ ಧಾ ಸರ್ಪ್ರೈಸ್ʼ (Adhi Dha Surprisu) ಐಟಂ ಸಾಂಗ್‌ನಲ್ಲಿನ ಡ್ಯಾನ್ಸ್‌ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.

WhatsApp Image 2025 05 06 at 6.56.15 PM

ನನಗೆ ನನ್ನ ಡ್ಯಾನ್ಸ್‌ ಬಗ್ಗೆ ಗೊತ್ತಿಲ್ಲ.. ಆದ್ರೆ ನಿರ್ದೇಶಕರು ಹೇಳಿದ್ದನ್ನು ಮಾಡುವುದು ನನ್ನ ಕೆಲಸ. ಚಿತ್ರೀಕರಣದ ಸಮಯದಲ್ಲಿ ಅವರಿಗೆ ನಾನು ಸಂಪೂರ್ಣವಾಗಿ ಶರಣಾಗುತ್ತೇನೆ. ಅವರು ಹೇಳಿದಂತೆ ಮಾಡುವುದನ್ನು ಬಿಟ್ಟು ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾದರೆ ಇಷ್ಟಪಡುತ್ತಾರೆ. ಇಷ್ಟವಾಗದಿದ್ದರೆ ಟೀಕಿಸುತ್ತಾರೆ ಎಂದು ನನಗೆ ತಿಳಿದಿದೆ. ಆ ಐಟಂ ಸಾಂಗ್‌ಗೆ ಸಿಕ್ಕ ಮಿಶ್ರ ಪ್ರತಿಕ್ರಿಯೆ ಮತ್ತು ವಿವಾದದ ಬಗ್ಗೆ ನನಗೆ ತಿಳಿದಿದೆ. ನಟಿಯಾಗಿ ನನ್ನ ಆಸೆ ವಿಭಿನ್ನ ಪಾತ್ರಗಳನ್ನು ಮಾಡುವುದು. ವಿಶೇಷ ಪಾತ್ರಗಳಲ್ಲಿ ನಟಿಸುವುದು ಯಾವುದೇ ತಪ್ಪಿಲ್ಲ. ಗ್ಲಾಮರ್‌ ಆಗಿ ಕಾಣಿಸಿಕೊಳ್ಳುವುದನ್ನು ತಪ್ಪಾಗಿ ಅರ್ಥೈಸಬಾರದು. ಅದು ಕೂಡ ನಟನೆಯ ಒಂದು ಭಾಗ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸದಾ ಬಿಕಿನಿಯಲ್ಲಿ ಕಾಣಿಸಿಕೊಳ್ತಿದ್ದ ದಿವ್ಯ ಭಾರತಿ ಸ್ಯಾರಿಯಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದು ಹೀಗೆ!

‘ರಾಬಿನ್ ಹುಡ್’ ಚಿತ್ರದ `ಅಧಿ ಧಾ ಸರ್ಪ್ರೈಸ್’ ಹಾಡಿಗೆ ಮನಮೋಹಕವಾಗಿ ಸೊಂಟ ಬಳುಕಿಸಿದ್ದ ಕೇತಿಕಾ ವಿರುದ್ಧ ಅಶ್ಲೀಲವಾಗಿ ನೃತ್ಯ ಮಾಡಿದ್ದಾರೆ ಎಂದು ಪ್ರೇಕ್ಷಕರು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ನಿರ್ಮಾಪಕರಿಗೆ ನೋಟಿಸ್ ನೀಡಿತ್ತು. ಇದಾದ ಬಳಿಕ ಹಾಡಿನಿಂದ ಆ ಡ್ಯಾನ್ಸ್‌ ದೃಶ್ಯವನ್ನು ತೆಗೆಯಲಾಗಿತ್ತು.

ದೆಹಲಿಯ ಸುಂದರಿ ಕೇತಿಕಾ ಶರ್ಮಾ ನಿರ್ದೇಶಕ ಪುರಿ ಜಗನ್ನಾಥ್ ಅವರ ಪುತ್ರ ಆಕಾಶ್ ಪುರಿ ಜೊತೆ ‘ರೊಮ್ಯಾಂಟಿಕ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಆ ಚಿತ್ರದಲ್ಲಿ ಅವರ ಗ್ಲಾಮರ್‌ಗೆ ನೂರಕ್ಕೆ ನೂರು ಅಂಕ ಸಿಕ್ಕರೂ, ಚಿತ್ರ ಯಶಸ್ವಿಯಾಗಿರಲಿಲ್ಲ. ಅದಾದ ನಂತರ, ಅವರು ನಾಗ ಶೌರ್ಯ ಜೊತೆ ‘ಲಕ್ಷ್ಯ’, ವೈಷ್ಣವ್ ತೇಜ್ ಜೊತೆ ‘ರಂಗ ರಂಗ ವೈಭವಂಗ’ ಮತ್ತು ಸಾಯಿ ಧರಮ್ ತೇಜ್ ಜೊತೆ ‘ಬ್ರೋ’ ಚಿತ್ರಗಳಲ್ಲಿ ನಟಿಸಿದ್ದರು. ಈ ಯಾವ ಚಿತ್ರಗಳೂ ಹಿಟ್ ಆಗಲಿಲ್ಲ. ಇದರಿಂದಾಗಿ ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಲು ಆರಂಭಿಸಿದ್ದಾರೆ. ಅದರಲ್ಲೂ ಅವರ ಅದೃಷ್ಟ ಅಷ್ಟಾಗಿ ಕುಲಾಯಿಸಿಲ್ಲ.

‘ರಾಬಿನ್ ಹುಡ್’ ಚಿತ್ರದಲ್ಲಿನ ಅವರ ಡ್ಯಾನ್ಸ್‌ಗಾಗಿ ಪ್ರೇಕ್ಷಕರು ಹೊಗಳಿದರೂ, ಅವರ ವಿವಾದಾತ್ಮಕ ಸ್ಟೆಪ್ಸ್‌ನಿಂದ ಅದೆಲ್ಲ ವ್ಯರ್ಥವಾದಂತಾಗಿದೆ. ಇದನ್ನೂ ಓದಿ: ಅಯ್ಯೋ ನನಗೆ ಹೊಟ್ಟೆ ಬಂದಿದೆ ಎಂದಿದ್ದ ನಟಿ ರಿತಿಕಾ ಸಿಂಗ್ ಸೊಂಟ ಬಳ್ಳಿಯಂತಾಗಿದ್ದು ಹೇಗೆ ಗೊತ್ತಾ?

Share This Article