ತೆಲುಗು ನಟ ಸತ್ಯದೇವ್ (Satyadev) ಮತ್ತು ಡಾಲಿ (Daali Dhananjay) ನಟನೆಯ ‘ಜೀಬ್ರಾ’ (Zebra) ಸಿನಿಮಾ ಇದೇ ನ.22ರಂದು ರಿಲೀಸ್‌ಗೆ ಸಜ್ಜಾಗಿದೆ. ಪ್ರಚಾರ ಕಾರ್ಯದಲ್ಲಿ ಬ್ಯುಸಿಯಿರುವ ‘ಜೀಬ್ರಾ’ ಚಿತ್ರತಂಡ ಇದೀಗ ಬೆಂಗಳೂರಿನ ಶಿವಣ್ಣ ನಿವಾಸಕ್ಕೆ ಭೇಟಿ ಕೊಟ್ಟಿದೆ. ಶಿವಣ್ಣರನ್ನು ನಟ ಸತ್ಯದೇವ್ ಭೇಟಿಯಾಗಿದ್ದಾರೆ. ಇದನ್ನೂ ಓದಿ:ಗುಲಾಬಿ ಹಿಡಿದು ಪೋಸ್ ಕೊಟ್ಟ ‘ಸಿಂಗಾರ ಸಿರಿ’ ಸಪ್ತಮಿ
ಇಂದು (ನ.19) ಸಂಜೆ ಬೆಂಗಳೂರಿನಲ್ಲಿ ‘ಜೀಬ್ರಾ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿದೆ. ಹಾಗಾಗಿ ಇಡೀ ಟೀಮ್ ಬೆಂಗಳೂರಿಗೆ ಆಗಮಿಸಿದೆ. ಇದರ ನಡುವೆ ಸತ್ಯದೇವ್ & ಟೀಮ್ ಶಿವಣ್ಣರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ, ಶಿವಣ್ಣ ಅವರು ಸತ್ಯದೇವ್ ನಟನೆಯ ‘ಜೀಬ್ರಾ’ ಸಿನಿಮಾಗೆ ಶುಭಹಾರೈಸಿದ್ದಾರೆ.
ಇನ್ನೂ ‘ಜೀಬ್ರಾ’ ಸಿನಿಮಾ ಇದೇ ನ.22ಕ್ಕೆ ಬಹಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ಡಾಲಿ, ಸತ್ಯದೇವ್, ಅಮೃತಾ ಅಯ್ಯಂಗಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.