ಕೆಜಿಎಫ್ 2 ಐವತ್ತನೇ ದಿನದ ಸಂಭ್ರಮದಲ್ಲಿ ತೆಲುಗು ನಟ ಪ್ರಭಾಸ್

Public TV
1 Min Read
KGF2 3

ಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಕೆಜಿಎಫ್ 2 ಸಿನಿಮಾ ಐವತ್ತು ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಚಿತ್ರತಂಡವು ಭರ್ಜರಿ ಪಾರ್ಟಿಯೊಂದನ್ನು ಆಯೋಜನೆ ಮಾಡಿತ್ತು. ಈ ಸಂತೋಷ ಕೂಟದಲ್ಲಿ ತೆಲುಗಿನ ಹೆಸರಾಂತ ನಟ ಪ್ರಭಾಸ್ ಕೂಡ ಆಗಮಿಸಿದ್ದರು. ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್ ಬೆಂಗಳೂರಿಗೆ ಬಂದು ಹೊಂಬಾಳೆ ಫಿಲ್ಮ್ಸ್ ಸದಸ್ಯರಿಗೆ ಶುಭಾಶಯ ಹೇಳಿದರು. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

KGF2 2

ಐವತ್ತು ದಿನಗಳ ಈ ಸಂಭ್ರಮವನ್ನು ದೊಡ್ಡಮಟ್ಟದಲ್ಲಿ ಮಾಡುತ್ತಾರೆ ಎಂಬ ನಿರೀಕ್ಷೆ ಅಭಿಮಾನಿಗಳಿಗೆ ಇತ್ತು. ಆದರೆ, ಸಿನಿಮಾ ತಂಡ ತಮಗೆ ಮಾತ್ರ ಸೀಮಿತ ಮಾಡಿಕೊಂಡು ಕೇಕ್ ಕತ್ತರಿಸುವ ಮೂಲಕ ಸಂಭ್ರಮ ಆಚರಿಸಿದೆ. ಐವತ್ತು ದಿನಗಳ ಸಂಭ್ರಮಕ್ಕೆ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ ಕಿರಗಂದೂರು ಸೇರಿದಂತೆ ಚಿತ್ರ ತಂಡ ಭಾಗಿ ಆಗಿತ್ತು. ಇದನ್ನೂ ಓದಿ : ಕೆಜಿಎಫ್ 2 ಐವತ್ತು ದಿನ ಪೂರೈಸಿದ ಬೆನ್ನಲ್ಲೆ ಮತ್ತೊಂದು ಹೊಸ ಸಿನಿಮಾ ರಿಲೀಸ್ ಘೋಷಣೆ

KGF2 1

400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐವತ್ತು ದಿನ ಪೂರೈಸಿರುವ ಕೆಜಿಎಫ್ 2 ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿದೆ. ಬಾಲಿವುಡ್ ಮಂದಿಯನ್ನು ನಿದ್ದೆಗೆಡಿಸುವಂತೆ ಮಾಡಿದೆ. ಈಗಲೂ ಒಳ್ಳೆಯ ಗಳಿಕೆಯಲ್ಲೇ ಚಿತ್ರ ಸಾಗುತ್ತಿದೆ. ಬಹುಶಃ ನೂರು ದಿನಗಳನ್ನು ಪೂರೈಸಿದಾಗ ದೊಡ್ಡ ಮಟ್ಟದಲ್ಲಿ ಸಂಭ್ರಮಾಚಾರಣೆ ಮಾಡಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.

Share This Article
Leave a Comment

Leave a Reply

Your email address will not be published. Required fields are marked *