ಹೈದರಾಬಾದ್: ಇತ್ತೀಚೆಗಷ್ಟೆ ಟಾಲಿವುಡ್ ನಟ ನಿತಿನ್ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಈಗ ನಿತಿನ್ ಮದುವೆ ಮುಂದೂಡಿಕೆಯಾಗಿದೆ ಎಂದು ತಿಳಿದು ಬಂದಿದೆ.
ಹೌದು.ನಿತಿನ್ ಏಪ್ರಿಲ್ 16ರಂದು ದುಬೈನಲ್ಲಿ ತಮ್ಮ ಪ್ರೇಯಸಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದರು. ಈಗ ನಿತಿನ್ ಮದುವೆ ಮುಂದಕ್ಕೆ ಹೋಗಿದೆ. ನಿತಿನ್ ಮದುವೆ ಪೋಸ್ಟ್ ಪೋನ್ ಆಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಏಪ್ರಿಲ್ 15 ರಂದು ನಿಗದಿಯಾಗಿದ್ದ ಮದುವೆ, ಮೇ ತಿಂಗಳಲ್ಲಿ ನಡೆಯಲಿದೆ ಎನ್ನಲಾಗಿದೆ.
Advertisement
Advertisement
ಮದುವೆ ತಯಾರಿ ಮಾಡಿಕೊಳ್ಳಲು ಕಡಿಮೆ ಸಮಯ ಉಳಿದಿದೆ ಎಂಬ ಕಾರಣಕ್ಕೆ ಕುಟುಂಬದವರು ಮದುವೆಯನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಏಪ್ರಿಲ್ ಬದಲು ಮೇ ತಿಂಗಳಲ್ಲಿ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ದುಬೈನಲ್ಲಿ ಹೋಟೆಲ್ನಲ್ಲಿ ನಿತಿನ್ ಮದುವೆ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಹೋಟೆಲ್ ಕೂಡ ಬುಕ್ ಆಗಿದೆ.
Advertisement
ನಿತಿನ್ ತಮ್ಮ ಬಹುದಿನದ ಗೆಳತಿ ಶಾಲಿನಿ ಅವರ ಕೈಹಿಡಿಯಲಿದ್ದಾರೆ. ಸುಮಾರು ನಾಲ್ಕೈದು ವರ್ಷದಿಂದ ಶಾಲಿನಿ ಹಾಗೂ ನಿತಿನ್ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಈಗ ತಮ್ಮ ಗೆಳತಿಯ ಜೊತೆ ದಾಂಪತ್ಯ ಜೀವನ ಆರಂಭಿಸಲು ನಿತಿನ್ ನಿರ್ಧರಿಸಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲೂ ತಿಳಿಸಿ, ಹಿರಿಯರ ಸಮ್ಮತಿ ಪಡೆದು ಈ ಜೋಡಿ ಮದುವೆಯಾಗುತ್ತಿದ್ದಾರೆ.
Advertisement
ಸದ್ಯಕ್ಕೆ ನಿತಿನ್ ವೆಂಕಿ ಕುಡುಮುಲಾ ನಿರ್ದೇಶನದ ‘ಭೀಷ್ಮ’ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಈ ಚಿತ್ರದಲ್ಲಿ ನಿತಿನ್ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಈ ಚಿತ್ರ ತೆರೆಕಂಡ ಬಳಿಕ ನಿತಿನ್ ತಮ್ಮ ಪ್ರೇಯಸಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಾಗಿದ್ದಾರೆ.