ಭಾರತದೊಂದಿಗೆ ಭಿನ್ನಾಭಿಪ್ರಾಯ ಮರೆತು ನಮ್ಮ ಲಸಿಕೆಯನ್ನು ತರಿಸಿಕೊಳ್ಳಿ: ಚೀನಾಗೆ ಪೂನಾವಾಲಾ ಸಲಹೆ

Public TV
2 Min Read
Adar Poonawalla

ದಾವೋಸ್: ಭಾರತದೊಂದಿಗಿನ (India) ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಚೀನಾ (China) ಕೋವಿಡ್ ಲಸಿಕೆಗಳನ್ನು (Vaccine) ತರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಬೇಕು ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮುಖ್ಯಸ್ಥ ಅದಾರ್ ಪೂನಾವಾಲಾ (Adar Poonawalla) ಸಲಹೆ ನೀಡಿದ್ದಾರೆ.

ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಿಜ್ಜರ್‌ಲ್ಯಾಂಡ್‌ನ ದಾವೋಸ್‌ಗೆ ಆಗಮಿಸಿರುವ ಅವರು ಮಾಧ್ಯಮದ ಜೊತೆ ಮಾತನಾಡಿ, ಚೀನಾ ಇದೀಗ ಕೋವಿಡ್‌ನಿಂದ (Covid-19) ಚೇತರಿಸಿಕೊಳ್ಳುವುದು ಮುಖ್ಯವಾಗಿದೆ. ಇದು ಜಗತ್ತಿಗೂ ಒಳಿತು. ನಾವು ಚೀನಾದೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ರಾಜಕೀಯ ಭಿನ್ನಾಭಿಪ್ರಾಯಗಳು, ಸಮಸ್ಯೆಗಳು ಹಾಗೂ ಯಾವುದೇ ರೀತಿಯ ಆತಂಕಗಳನ್ನು ಬದಿಗಿಟ್ಟು ನಮ್ಮ ಲಸಿಕೆಗಳನ್ನು ಬೂಸ್ಟರ್ ಡೋಸ್ ಆಗಿ ಪಡೆದುಕೊಳ್ಳಲು ಕೇಳುತ್ತಿದ್ದೇವೆ ಎಂದಿದ್ದಾರೆ.

Serum CEO Adar Poonawalla COVID 19 e1619891216185

ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ತನ್ನ 2 ಪ್ರಮುಖ ಲಸಿಕೆಗಳಾದ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಅನ್ನು ಕೊರೊನಾ ಸೋಂಕಿಗಾಗಿ ಮಾರಾಟ ಮಾಡುತ್ತಿದೆ. ಚೀನಾ ಇದೀಗ ಮತ್ತೆ ಕೊರೊನಾ ಸೋಂಕಿಗೆ ನಲುಗುತ್ತಿದೆ. ಜಗತ್ತು ತನ್ನ ಪೂರೈಕೆ ಸರಪಳಿಯನ್ನು ಕಾರ್ಯಗತಗೊಳಿಸುವುದು ಮುಖ್ಯ. ಈ ಸಂದರ್ಭದಲ್ಲಿ ಚೀನಾ ಲಸಿಕೆಗಳನ್ನು ತರಿಸಿ, ಸೋಂಕಿನಿಂದ ಚೇತರಿಸಿಕೊಂಡರೆ ಜಗತ್ತಿಗೂ ಒಳಿತಾಗುತ್ತದೆ ಎಂದು ತಿಳಿಸಿದರು.

Adar Poonawalla

ಚೀನಾ ಇದೀಗ ಕೋವಿಡ್‌ನಿಂದ ನರಳಾಡುತ್ತಿದ್ದು, ಮುಂದೆ ಯಾವ ಹೆಜ್ಜೆಯಿಟ್ಟು ಸಾಗಬೇಕು ಎಂಬುದನ್ನು ತ್ವರಿತವಾಗಿ ನಿರ್ಧರಿಸಲಿದೆ ಎಂದು ನಾನು ಭಾವಿಸುತ್ತೇನೆ. ಚೀನಾ ಪಾಶ್ಚಿಮಾತ್ಯ ದೇಶಗಳಿಂದ ಲಸಿಕೆಯನ್ನು ಆಮದು ಮಾಡಿಕೊಳ್ಳುವ ದಿಟ್ಟ ನಿರ್ಧಾರ ಮಾಡಬೇಕಾಗುತ್ತದೆ. ಒಂದು ವೇಳೆ ಚೀನಾ ಈಗಲೇ ಮಹತ್ವದ ನಿರ್ಧಾರ ಮಾಡದೇ ಹೋದರೆ ಮುಂದೆ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾಗಬಹುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಕೊಪ್ಪಳದಲ್ಲಿ ಕೋಳಿಗಳನ್ನು ಅರೆಸ್ಟ್ ಮಾಡಿದ ಖಾಕಿ

CHINA COVID 19 1

ಕೋವಿಡ್ 2020ರ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕಂಡುಬಂದಿತ್ತು. ಇಡೀ ಜಗತ್ತು ಕೊರೊನಾ ಸಂಕಷ್ಟವನ್ನು ಅನುಭವಿಸಿ ನರಳಿದೆ. ಇದೀಗ ಮತ್ತೆ ಚೀನಾದಲ್ಲಿ ಕೊರೊನಾ ಪ್ರಕರಣ ಉಲ್ಬಣಗೊಳ್ಳುತ್ತಿದೆ. ಆದರೆ ಚೀನಾದಲ್ಲಿ ಆರೋಗ್ಯ ಮೂಲಸೌಕರ್ಯದ ಕೊರತೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವುಗಳನ್ನು ಕಾಣುತ್ತಿದೆ. ಇದನ್ನೂ ಓದಿ: ಚಲನಚಿತ್ರಗಳ ಬಗ್ಗೆ ಅನಗತ್ಯ ಟೀಕೆ ಮಾಡಬೇಡಿ: ನಾಯಕರಿಗೆ ಮೋದಿ ಸೂಚನೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *