ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ 11ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧ ಸಾಕು ಎಂದು ವಿಶ್ವದ ಹಲವು ರಾಷ್ಟ್ರಗಳು ಒತ್ತಾಯಿಸುತ್ತಿವೆ. ಇದೀಗ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಕೂಡ ಯುದ್ಧ ಬೇಡ ಎಂಬುದನ್ನು ರಷ್ಯಾ ಅಧ್ಯಕ್ಷ ಪುಟಿನ್ ಗೆ ಅರ್ಥ ಮಾಡಿಸುವಂತೆ ಮನವಿ ಮಾಡಿದ್ದಾರೆ.
All countries who enjoy special relations with India can appeal to PM Modi that we call on him to continue reaching out to Pres Putin &explaining that this war is against the interest of all. People of Russia are not interested in it either: Ukraine Foreign Minister Dmytro Kuleba pic.twitter.com/JBHwSNj2Fq
— ANI (@ANI) March 5, 2022
Advertisement
ಸದ್ಯ ಯುದ್ಧ ನಿಲ್ಲಿಸುವುದು ಪುಟಿನ್ ಕೈಯಲ್ಲಿಯೇ ಇದೆ. ಈ ಮಧ್ಯೆ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಆ ಸಾಲಿಗೆ ಡಿಮಿಟ್ರೋ ಕುಲೆಬಾ ಸೇರಿದ್ದಾರೆ. ಈ ಯುದ್ಧ ಎಲ್ಲರ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುತ್ತಿದೆ. ಹೀಗಾಗಿ ಯುದ್ಧ ಬೇಡ ಎಂಬುದನ್ನು ಪುಟಿನ್ ಗೆ ಅರ್ಥ ಮಾಡಿಸಿ. ಇದು ಪ್ರಧಾನಿ ಮೋದಿಗೆ ಮಾತ್ರವಲ್ಲದೆ ಇಡೀ ಭಾರತೀಯರಿಗೆ ಈ ನನ್ನ ಸಂದೇಶ ಎಂದೂ ಹೇಳಿದ್ದಾರೆ. ಹಾಗೆಯೇ ಉಳಿದ ಕೆಲವು ದೇಶಗಳನ್ನೂ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ತೈಲದಲ್ಲಿ ಉಕ್ರೇನ್ ಪ್ರಜೆಗಳ ರಕ್ತದ ವಾಸನೆ ಬೆರೆತಿದೆ: ಉಕ್ರೇನ್ ವಿದೇಶಾಂಗ ಸಚಿವ
Advertisement
Ordinary Indians can put pressure on the Russian Embassy in India to demand from them to stop the war. Ukraine is fighting only because we were attacked & we have to defend our land because Putin does not recognize our right to exist: Ukraine Foreign Minister Dmytro Kuleba pic.twitter.com/LbIQH2jAI7
— ANI (@ANI) March 5, 2022
Advertisement
ಇದೇ ವೇಳೆ ರಷ್ಯಾ ಅಧ್ಯಕ್ಷನೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ, ಚೀನಾ, ನೈಜೀರಿಯಾ ಸೇರಿ ಇನ್ನಿತರ ರಾಷ್ಟ್ರಗಳಿಗೆ ಯುದ್ಧ ನಿಲ್ಲಿಸಲು ಸಹಾಯ ಮಾಡುವಂತೆಯೂ ಕೇಳಿಕೊಂಡಿದ್ದಾರೆ. ರಷ್ಯಾ ಮೇಲಿನ ನಿರ್ಬಂಧಗಳನ್ನು ಹೆಚ್ಚಿಸಿ. ಆ ದೇಶ ಯುದ್ಧದ ನಿಯಮ ಉಲ್ಲಂಘಿಸುತ್ತಿದೆ. ಈಗ ಕದನ ವಿರಾಮವನ್ನೂ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಉಕ್ರೇನ್ನಲ್ಲಿರುವ ಇತರ ದೇಶಗಳ ನಾಗರಿಕರು ಹಾಗೂ ನಮ್ಮ ನಾಗರಿಕರನ್ನು ಇಲ್ಲಿಂದ ಸ್ಥಳಾಂತರಿಸಲು ಅವಕಾಶ ಕೊಡಿ ಎಂದು ಕುಲೆಬಾ ಮನವಿ ಮಾಡಿದ್ದಾರೆ.