ವಾರದ ಹಿಂದೆಯಷ್ಟೇ ಉಡುಪಿಯ ಕಾಪುನಲ್ಲಿರುವ ಕೊರಗಜ್ಜ (Koragajja) ದೇವಸ್ಥಾನಕ್ಕೆ ನಟಿ ಪ್ರೇಮಾ (Prema) ಭೇಟಿ ನೀಡಿ, ದೈವದ ದರ್ಶನ ಪಡೆದಿದ್ದರು. ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ಹಿನ್ನೆಲೆಯಲ್ಲಿ ನಟಿ ಪ್ರೇಮಾ ಅಲ್ಲಿಗೆ ಹೋಗಿದ್ದು ತಮ್ಮ ಎರಡನೇ ಮದುವೆ (second marriage) ವಿಚಾರವಾಗಿ ಎನ್ನುವ ಸುದ್ದಿ ಹರಡಿತ್ತು. ಪ್ರೇಮಾ ಸದ್ಯ ಎರಡನೇ ಮದುವೆ ತಯಾರಿಯಲ್ಲಿದ್ದಾರೆ ಎಂದೂ ಹೇಳಲಾಗಿತ್ತು. ಈ ಎಲ್ಲ ವಿಷಯಗಳ ಕುರಿತು ಸ್ವತಃ ಪ್ರೇಮಾ ಅವರೇ ಸ್ಪಷ್ಟನೆ (clarification) ನೀಡಿದ್ದಾರೆ.
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮಾ, ‘ಮದುವೆ ಬಗ್ಗೆ ಹಬ್ಬಿರುವ ಸುದ್ದಿ ಕೇವಲ ಗಾಸಿಪ್. ಎರಡನೇ ಮದುವೆ ವಿಚಾರ ಎಲ್ಲವೂ ಸುಳ್ಳು. ನಾನು ಹೊಸ ಹೊಸ ಕೆಲಸಗಳ ಬಗ್ಗೆ ಯೋಚನೆ ಮಾಡ್ತಿದ್ದಿನಿ. ಮದುವೆ ಸಮಯ ಬಂದಾಗ ಎಲ್ಲರಿಗೂ ತಿಳಿಸ್ತಿನಿ. ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ಕೊಟ್ಟಿದು ಮದುವೆ ವಿಚಾರವಾಗಿ ಅಲ್ಲ. ಸ್ನೇಹಿತೆಯ ಮದುವೆಗೆ ಹೋಗಿ ಅಲ್ಲಿಂದ ದೇವರ ದರ್ಶನ ಮಾಡಿ ಬಂದೆ. ಮದುವೆ ವಿಚಾರ ಸುಳ್ಳು’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ವಿನಯ್ ರಾಜ್ಕುಮಾರ್ಗೆ ನಾಯಕಿಯಾದ `ವಿಕ್ರಮ್’ ನಟಿ ಸ್ವಾತಿಷ್ಟ ಕೃಷ್ಣನ್
Advertisement
Advertisement
ಪ್ರೇಮಾ ಅವರ ಮದುವೆ ವಿಚಾರವಾಗಿ ಈ ರೀತಿ ಸುಳ್ಳು ಸುದ್ದಿ ಹರಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಇಂಥದ್ದೊಂದು ಸುದ್ದಿ ಆಗಿತ್ತು. ರೇಡಿಯೋ ಜಾಕಿ ಜೊತೆ ಅವರು ಮದುವೆ ಆಗಲಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು. ಅದೆಲ್ಲವೂ ಸುಳ್ಳು ಎಂದು ರೇಡಿಯೋ ಜಾಕಿ ಅವರೇ ಉತ್ತರ ಕೊಟ್ಟಿದ್ದರು. ಇದೀಗ ಮತ್ತೆ ಎರಡನೇ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಈ ಕುರಿತು ಪ್ರೇಮಾ ಸ್ಪಷ್ಟನೆಯನ್ನೂ ಕೊಟ್ಟೂ ಆಗಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k