ಕ್ರಿಕೆಟ್‌ಗೂ ಸಿನಿಮಾಗೂ ನಂಟು ಇದೆ. ಸಿನಿಮಾ ಕಲಾವಿದರಲ್ಲಿ ಎಷ್ಟೋ ಮಂದಿ ತಾವೊಬ್ಬ ಉತ್ತಮ ಕ್ರಿಕೆಟ್ ಆಟಗಾರನಾಗಬೇಕೆಂದು ಬಯಸಿದ್ದವರು. ಕಲಾವಿದರು ಕೂಡಾ ಕ್ರಿಕೆಟ್ ಆಡಲು ನೋಡಲು ಬಯಸುತ್ತಾರೆ. ಇದೇ ಕಾರಣಕ್ಕೆ ಕಳೆದ 2 ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ (Television Premiere) ನಡೆಯುತ್ತಿದೆ. ಇದೀಗ ಮೂರನೇ ಸೀಸನ್ ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಜನವರಿಯಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3 ನಡೆಯಲಿದೆ. ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಎನ್ 1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಾ ಬಂದಿದೆ. ಈಗಾಗಲೇ ಯಶಸ್ವಿಯಾಗಿ 2 ಸೀಸನ್‌ಗಳು ಮುಗಿದಿದ್ದು, 3ನೇ ಸೀಸನ್ ಜನವರಿ ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಬಿಡ್ಡಿಂಗ್ ನಡೆಸಲಾಗಿದ್ದು, ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ (Basavaraja Horatti) ವಿಶೇಷ ಅತಿಥಿಯಾಗಿ ಭಾಗವಹಿಸಿ ಟೂರ್ನಮೆಂಟ್ ಗೆ ಶುಭ ಕೋರಿದರು. ಟಿಪಿಎಲ್ ಬ್ರ್ಯಾಂಡ್ ಅಂಬಾಸಿಡರ್ ರಾಗಿಣಿ ದ್ವಿವೇದಿ ಇದ್ದಾರೆ.
Advertisement
ಈ ವೇಳೆ ಮಾತನಾಡಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಬಹಳ ಖುಷಿ ಅನಿಸುತ್ತಿದೆ. ನನ್ನ ದೃಷ್ಟಿಯಲ್ಲಿ ಜೀವನದಲ್ಲಿ ಎರಡು ವ್ಯಕ್ತಿಗಳನ್ನು ನೋಡುತ್ತೀರಾ? ಯಾರು ಆ ಎರಡು ವ್ಯಕ್ತಿಗಳು. ಸತ್ತರು ಬದುಕಿದ್ದಾಗೆ ಇರುವವರು…ಮತ್ತೊಬ್ಬರು ಬದುಕಿದ್ದು ಸತ್ತಾಗೆ ಇರುವವರು. ಸತ್ತ ಬದುಕಿದ್ದವರು ಪುನೀತ್. ಅಪ್ಪು ನನ್ನ ಜೊತೆ ಆತ್ಮೀಯವಾಗಿದ್ದವರು. ಮಾಧ್ಯಮದವರು ಹಾಗೂ ಸೀರಿಯಲ್ ನವರು ಕೂಡಿ ಕ್ರಿಕೆಟ್ ಟೂರ್ನಮೆಂಟ್ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯ. ನಾವು ಜೀವನದಲ್ಲಿ ಕ್ರಿಕೆಟ್ ಆಡುತ್ತಾ ಇದ್ದೇವು. ಅದು ಮನುಷ್ಯನಿಗೆ ರಿಲ್ಯಾಕ್ಸ್ ನೀಡುತ್ತದೆ. ನಿಮಗೆ ಏನೂ ಅನುಕೂಲಬೇಕು ಸಾಧ್ಯವಾದ ಎಲ್ಲಾ ರೀತಿ ನಾನು ನೀಡುತ್ತೇನೆ. ನೀವು ಏನಾದರೂ ಹೊಸದೊಂದನ್ನು ಮಾಡಬೇಕು. ಕ್ರಿಕೆಟ್ ಆಡಿ, ಏನೇ ಮಾಡಿ ಜೀವನದಲ್ಲಿ ನಿಮ್ಮನ್ನು ನೆನಪಿಡುವಂತಹ ಕೆಲಸ ಮಾಡಿ ಎಂದರು.
Advertisement
Advertisement
ಟಿಪಿಎಲ್ ದಿನದಿಂದ ದಿನಕ್ಕೆ ಆಕರ್ಷಿಸುತ್ತಿದ್ದು, ಐಪಿಎಲ್ ಮಾದರಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. 150 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಬಿಡ್ ಗೆ ಮಾರಾಟವಾದ ಆಟಗಾರರಿಗೆ N1 ಅಕಾಡೆಮಿ ಕಡೆಯಿಂದ ಹಣದ ರೂಪದಲ್ಲಿ ರಿವಾರ್ಡ್ ಸಹ ನೀಡಲಾಗಿದೆ.
Advertisement
ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, ಕೆಕೆಆರ್ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೇವಿಯರ್ಸ್ , ಎವಿಆರ್ ಟಸ್ಕರ್ಸ್, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಕ್ವಾಡ್, ಇನ್‌ಸೇನ್ ಕ್ರಿಕೆಟ್ ಟೀಂ, ಜಿಎಲ್‌ಆರ್ ವಾರಿಯರ್ಸ್ ಸೇರಿದಂತೆ ಒಟ್ಟು 10 ಟೀಮ್‌ಗಳು ಭಾಗವಹಿಸಲಿದ್ದ 150 ಸೆಲೆಬ್ರಿಟಿಗಳು ಈ ಟೂರ್ನಮೆಂಟ್ ಗೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್‌ಗಳಿರಲಿದ್ದಾರೆ. ಎವಿಆರ್ ಗ್ರೂಪ್ಸ್‌ನ ಹೆಚ್ ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.
ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ. ರಂಜಿತ್ ಕುಮಾರ್ ಎಸ್ ಓನರ್, ಜಿಎಲ್‌ಆರ್ ವಾರಿಯರ್ಸ್ ಟೀಂಗೆ ಲೂಸ್ ಮಾದ ಯೋಗಿ ನಾಯಕನಾದರೆ ರಾಜೇಶ್ ಎಲ್ ಓನರ್, ಇನ್‌ಸೇನ್ ಕ್ರಿಕೆಟ್ ಟೀಂಗೆ ರವಿಶಂಕರ್ ಗೌಡ ನಾಯಕ-ಫೈಜಾನ್ ಖಾನ್ ಓನರ್, ದಿ ಬುಲ್ ಸ್ಕ್ವಾಡ್ ತಂಡಕ್ಕೆ ಶರತ್ ಪದ್ಮನಾಭ್ ನಾಯಕ-ಮೋನಿಶ್ ಓನರ್, ಭಜರಂಗಿ ಬಾಯ್ಸ್ ಟೀಂಗೆ ಸಾಗರ್ ಬಿಳಿಗೌಡ ನಾಯಕ- ಸ್ವಸ್ತಿಕ್ ಆರ್ಯ ಓನರ್, ರಾಸು ವಾರಿಯರ್ಸ್ ಟೀಂಗೆ ದೀಕ್ಷಿತ್ ಶೆಟ್ಟಿ ನಾಯಕ-ರಘು ಭಟ್ ಹಾಗೂ ಸುಗುಣ ಓನರ್, ಎವಿಆರ್ ಟಸ್ಕರ್ಸ್‌ಗೆ ಚೇತನ್ ಸೂರ್ಯ ನಾಯಕ – ಅರವಿಂದ್ ವೆಂಕಟ್ ರೆಡ್ಡಿ ಓನರ್, ಬಯೋಟಾಪ್ ಲೈಫ್ ಸೇವಿಯರ್ಸ್ ಟೀಂಗೆ ಅಲಕಾ ನಂದ ಶ್ರೀನಿವಾಸ್ ನಾಯಕ Dr.ವಿಶ್ವನಾಥ್ ಸಿದ್ದರಾಮರೆಡ್ಡಿ ಹಾಗು ಪ್ರಸನ್ನ ಓನರ್, ಮೀಡಿಯಾ ಹೌಸ್‌ಗೆ ಅರುಣ್ ರಾಮ್ ಗೌಡ ನಾಯಕ-ಲಕ್ಷ್ಮೀ ಕಾಂತ್ ರೆಡ್ಡಿ ಓನರ್, ಗೋಲ್ಡನ್ ಈಗಲ್ ವಿಹಾನ್ ನಾಯಕ-ಕುಶಾಲ್ ಗೌಡ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
Web Stories