ಕಿರುತೆರೆ ಕ್ರಿಕೆಟ್ ಗುಂಗು ಡಿಸೆಂಬರ್ ಎರಡನೇ ವಾರದಿಂದ TCL ಕಿಕ್ ಸ್ಟಾರ್ಟ್

Public TV
2 Min Read
TCL 3 1

ಬೆಂಗಳೂರು: ಈಗ ಎಲ್ಲಿ ನೋಡಿದ್ರೂ ಟಿ20 ಕ್ರಿಕೆಟ್‍ನದ್ದೇ ಹಂಗಾಮ. ಇದೀಗ ಕಿರುತೆರೆಯ ಕಲಾವಿದರು ಕೂಡ ಬ್ಯಾಟ್, ಬಾಲ್ ಹಿಡಿದು ಕ್ರಿಕೆಟ್ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ.

TCL 3

ವಾಸವಿ ವೆಂಚರ್ಸ್ ಸಂಸ್ಥೆ ವತಿಯಿಂದ ದೀಪಕ್ ಹಾಗೂ ಮಂಜೇಶ್ ಪ್ರಯತ್ನದ ಟೆಲಿವಿಷನ್ ಕ್ರಿಕೆಟ್ ಲೀಗ್ ಈಗಾಗಲೇ ಯಶಸ್ವಿಯಾಗಿ 2 ಸೀಸನ್‍ಗಳನ್ನು ಪೂರೈಸಿ ಮೂರನೇ ಸೀಸನ್‍ಗೆ ಸಿದ್ಧವಾಗಿದೆ. ಈ TCLನಲ್ಲಿ ಕಿರುತೆರೆ ಕಲಾವಿದರ ದಂಡೇ ಭಾಗಿಯಾಗಲಿದೆ. ಬರುವ ಡಿಸೆಂಬರ್ ಎರಡನೇ ವಾರದಿಂದ ಟಿಸಿಎಲ್ ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಇದನ್ನೂ ಓದಿ: ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋದ್ರು: ಜಯಪ್ರದಾ

TCL 3 2

ಈ ಬಗ್ಗೆ ಟಿಸಿಎಲ್ ಟೀಮ್ ಸುದ್ದಿಗೋಷ್ಠಿ ನಡೆದಿದ್ದು, ಸೀಸನ್ 3ರ ಲೋಗೋ ಅದ್ಧೂರಿಯಾಗಿ ಲಾಂಚ್ ಮಾಡಿದೆ. ಒಟ್ಟು 6 ತಂಡಗಳ ನಾಯಕರು ಹಾಗೂ ಆಯಾ ತಂಡದ ಸ್ಪರ್ಧಿಗಳು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಇದರ ಜೊತೆಗೆ ಪ್ರತಿ ಟೀಂನ ಅಂಬಾಸಿಡರ್ಸ್ ಆಗಿರುವ ಕಿರುತೆರೆ ನಟಿಯರಾದ ಸುಕೃತಾ ನಾಗ್, ರಶ್ಮಿ ಪ್ರಭಾಕರ್, ಪಲ್ಲವಿ ಗೌಡ, ಶೃತಿ ಸೇರಿದಂತೆ ಕೆಲ ನಟಿಯರು ಪಾಲ್ಗೊಂಡಿದ್ದರು.

TCL3

ಈ ಬಾರಿಯ ಟೆಲಿವಿಷನ್ ಕ್ರಿಕೆಟ್ ಲೀಗ್ 3ನಲ್ಲಿ ಬರೋಬ್ಬರಿ 102 ಸೆಲೆಬ್ರಿಟಿಗಳು ಭಾಗಿಯಾಗಲಿದ್ದು, ಈ ಪೈಕಿ ಮಾಸ್ಟರ್ ಆನಂದ್, ಬಿಗ್ ಬಾಸ್ ಮಂಜು ಪಾವಗಡ, ರಾಜೀವ್, ಚಂದು ಗೌಡ, ದಿಯಾ ಖ್ಯಾತಿಯ ದೀಕ್ಷಿತ್ ಸೇರಿದಂತೆ ಪ್ರಮುಖ ಕಿರುತೆರೆ ಕಲಾವಿದರು ಈ ಬಾರಿಯ ಟಿಸಿಎಲ್‍ಗೆ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿಯೇ ಮದುವೆಯಾಗಲು ಆಗಮಿಸಿದ ಪ್ರೇಮಿಗಳು

TCL 3 3

ಟಿಸಿಎಲ್‍ನಲ್ಲಿ ಒಟ್ಟು ಆರು ತಂಡಗಳು ಭಾಗಿಯಾಗಲಿವೆ. ಕ್ರೇಜ್ ಕಿಲ್ಲರ್, ಗ್ಯಾಂಗ್ ಗರುಡಸ್, ಗ್ರೌಂಡ್ ಹಂಟರ್, ಜಟಾಯು ಜೈಂಟ್ಸ್, ಕಿಂಗ್ ಕೇಸರಿಸ್ ಮತ್ತು ಶಾರ್ಪ್ ಸ್ಟ್ರೈಕರ್ಸ್ ಪಾಲ್ಗೊಳ್ಳಲಿದ್ದು, ಕಳೆದ ಎರಡು ವರ್ಷಗಳಿಂದ ರೋಚಕ ಹಣಾಹಣಿ ನೀಡಿರುವ ತಂಡಗಳು ಈ ಬಾರಿ ಮತ್ತಷ್ಟು ತಯಾರಿಯೊಂದಿಗೆ ರಗಡ್ ಆಗಿ ಎಂಟ್ರಿ ಕೊಡಲಿದ್ದಾರೆ. ಇದನ್ನೂ ಓದಿ: ಅಪ್ಪು ಸಾವಿಗೆ ಜಿಮ್‌, ವರ್ಕೌಟ್‌ ಕಾರಣ ಅಲ್ಲ: ನಟ ಪ್ರೇಮ್‌

ಎಲ್ಲಾ ಕಿರುತೆರೆ ಕಲಾವಿದರನ್ನು ಒಂದು ಕಡೆ ಸೇರಿಸುವುದು ಒಂದು ದೊಡ್ಡ ಚಾಲೆಂಜ್ ಸರಿ. ಈ ಚಾಲೆಂಜ್ ಈಗಾಗಲೇ ಎರಡು ಬಾರಿ ಗೆದ್ದಿರುವ ದೀಪಕ್-ಮಂಜೇಶ್ ಈ ಬಾರಿ ಕೂಡ ಸಕ್ಸಸ್ ಕಾಣುವ ನಿರೀಕ್ಷೆಯಲಿದ್ದಾರೆ. ಒಟ್ನಲ್ಲಿ ಅದ್ಧೂರಿಯಾಗಿ ನಡೆಯಲಿರುವ ಟಿಸಿಎಲ್ ಸೀಸನ್-3 ಮನರಂಜನೆಯ ಜೊತೆಗೆ ಎಲ್ಲ ಕಿರುತೆರೆಯ ಕಲಾವಿದರ ನಡುವೆ ಸ್ನೇಹ ಸಂಬಂಧ ಬೆಳೆಯುವುದಕ್ಕೆ ವೇದಿಕೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *