Bengaluru CityCinemaDistrictsKarnatakaLatestMain PostSandalwood

ಅಮ್ಮನಾಗ್ತಿದ್ದಾರೆ ಕಿರುತೆರೆ ನಟಿ ರಶ್ಮಿ ಜಯರಾಜ್: ಬೇಬಿ ಬಂಪ್ ಫೋಟೋಸ್ ವೈರಲ್

ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಮನೆಮಾತಾದ ಮುದ್ದು ಮುಖದ ನಟಿ ರಶ್ಮಿ ಜಯರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಬೇಬಿ ಶವರ್ ಫೋಟೋಶೂಟ್ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಶೂಟ್‌ಗಳು ವೈರಲ್ ಆಗುತ್ತಿದೆ.

ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ಗಮನ ಸೆಳೆದ ನಟಿ ರಶ್ಮಿ ಜಯರಾಜ್ ಕಳೆದ ವರ್ಷ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ರಿಚು ಎಂಬುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಚೆಂದದ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಆರೇಂಜ್ ಕಲರ್ ಫೋಟೋಶೂಟ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

 

View this post on Instagram

 

A post shared by Rashmi Jayraj (@rashmi_jayraj)

ಇತ್ತೀಚೆಗೆ ರಶ್ಮಿ ಜಯರಾಜ್ ಸೀಮಂತ ಫೋಟೋಗಳು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ `ಜಸ್ಟ್ ಮಾತ್ ಮಾತಲ್ಲಿ’ ನಟಿಯ ಬೇಬಿ ಬಂಪ್ ಫೋಟೋಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನೆಚ್ಚಿನ ನಟಿಯ ಖುಷಿ ನೋಡಿ ಅಭಿಮಾನಿಗಳು ಕೂಡ ಖುಷಿಪಡ್ತಿದ್ದಾರೆ. ಇದನ್ನೂ ಓದಿ: ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

 

View this post on Instagram

 

A post shared by Rashmi Jayraj (@rashmi_jayraj)

ಅಂದಹಾಗೆ, ಕಿರುತೆರೆಯ `ಮದು ಮಗಳು’, `ಜಸ್ಟ್ ಮಾತ್ ಮಾತಲ್ಲಿ’, `ನೀ ಹಚ್ಚಿದ ಕುಂಕುಮ’, `ವಿಧಿ’, ತಮಿಳಿನ `ನಾಮ್ ಇರುವರ್ ನಮಕ್ಕು ಇರುವರ್’ ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಮಿಳಿನ ಈ ಸೀರಿಯಲ್ ಮೂಲಕ ನಟಿ ರಶ್ಮಿ ತಮಿಳಿನ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು. ಸದ್ಯ ಬೇಬಿ ಬಂಪ್ ಫೋಟೋಶೂಟ್ ಮೂಲಕ ನಟಿ ರಶ್ಮಿ ಗಮನ ಸೆಳೆಯುತ್ತಿದ್ದಾರೆ.

Leave a Reply

Your email address will not be published.

Back to top button