Connect with us

Cinema

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ನಯನಾ

Published

on

ಬೆಂಗಳೂರು: ಕಿರುತೆರೆ ನಟಿ ಕೆ.ಎಂ.ನಯನಾ ಅವರು ಶುಕ್ರವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಬಗ್ಗೆ ನಯನಾ ಅವರ ಪತಿ ವೆಂಕಟೇಶ್ ಪ್ರಸಾದ್ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ವೆಂಕಟೇಶ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ, “ನಮ್ಮ ಮನೆಗೆ ಪುಟಾಣಿ ಅತಿಥಿ ಆಗಮಿಸಿದ್ದಾನೆ. ನಯನಾಗೆ ನಾರ್ಮಲ್ ಡೆಲಿವರಿಯಾಗಿದ್ದು, ಅಮ್ಮ ಹಾಗೂ ಮಗು ಇಬ್ಬರು ಕ್ಷೇಮವಾಗಿದ್ದಾರೆ. ವೈದ್ಯರ ಸಲಹೆ ಹಿನ್ನೆಲೆಯಲ್ಲಿ ನಯನಾ ಅವರು ಮೊಬೈಲ್ ಬಳಸುತ್ತಿಲ್ಲ. ಸದ್ಯದಲ್ಲೇ ಅವರು ಹಿಂತಿರುಗಲಿದ್ದಾರೆ. ನಿಮ್ಮ ಹಾರೈಕೆಗೆ ಧನ್ಯವಾದಗಳು” ಎಂದು ಪೋಸ್ಟ್ ಮಾಡಿದ್ದಾರೆ.

 

View this post on Instagram

 

A post shared by Nayana Km (@nayana_k.m) on

ಕಳೆದ ತಿಂಗಳು ಅಂದರೆ ಅಗಸ್ಟ್ ನಲ್ಲಿ ನಯನಾ ಅವರು ಸಿಂಪಲ್ ಆಗಿ ಸೀಮಂತ ಮಾಡಿಕೊಂಡಿದ್ದರು. ಸೀಮಂತ ಕಾರ್ಯಕ್ರಮದಲ್ಲಿ ನಯನಾ ಗುಲಾಬಿ ಬಣ್ಣದ ಸೀರೆ ಧರಿಸಿ ಸಖತ್ ಮಿಂಚಿದ್ದರು. ನಯನಾಗಾಗಿ ಅನೇಕ ಸಿಹಿ ತಿಂಡಿಗಳನ್ನು ಮಾಡಿದ್ದು, ಸಾಂಪ್ರದಾಯಕವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದರು. ಸೀಮಂತ ಕಾರ್ಯಕ್ರಮ ಮುಗಿದ ಬಳಿ ಪತಿ, ಸಂಬಂಧಿಕರ ಜೊತೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ನಯನಾ ಅವರು ಸ್ನಾತಕೋತ್ತರ ಪದವಿ ಪಡೆದಿದ್ದು, ಆ ಬಳಿಕ 2 ವರ್ಷ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದರು. `ಚಿಕ್ಕಮ್ಮ’ ಧಾರವಾಯಿ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದ್ದ ನಯನಾ ಅವರು, ಇದುವರೆಗೂ `ಮನೆದೇವ್ರು’, `ಗಾಳಿಪಟ’, `ಪುಟ್ಟಗೌರಿ ಮದುವೆ’ ಸೇರಿದಂತೆ ಧಾರಾವಾಯಿ ಹಾಗೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆಯಾದ ಬಳಿಕ ವೃತ್ತಿ ಜೀವನಕ್ಕೆ ಬ್ರೇಕ್ ಹೇಳಿದ್ದರು. `ಸತ್ಯಂ ಶಿವಂ ಸುಂದರಂ’ ಧಾರಾವಾಯಿಯಲ್ಲಿ ತಾಪ್ಸಿ ಪಾತ್ರದ ಮೂಲಕ ಮನೆಮಾತಾಗಿದ್ದರು.

Click to comment

Leave a Reply

Your email address will not be published. Required fields are marked *