ತೆಲುಗು ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ರಾಧಾ ರಮಣ’ ಖ್ಯಾತಿಯ ದೀಪಿಕಾ

Public TV
1 Min Read
actress marriage

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ರಾಧಾ ರಮಣ’ ಧಾರಾವಾಹಿ ಈಗ ಮುಗಿದಿದೆ. ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದ ದೀಪಿಕಾ ಪಾತ್ರಧಾರಿಯ ಅನುಷಾ ಹೆಗ್ಡೆ ತೆಲುಗು ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇತ್ತೀಚೆಗೆ ಅನುಷಾ ತೆಲುಗು ನಟ ಪ್ರತಾಪ್ ಸಿಂಗ್ ಶಾ ಅವರ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆಯಲ್ಲಿ ಅನುಷಾ ಹಾಗೂ ಪ್ರತಾಪ್ ಗೋಲ್ಡನ್ ಹಾಗೂ ಕೆಂಪು ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಇವರ ಮದುವೆಗೆ ಕುಟುಂಬಸ್ಥರು, ಕಿರುತೆರೆ ನಟ-ನಟಿಯರು ಆಗಮಿಸಿದ್ದರು. ಇದನ್ನೂ ಓದಿ: ತೆಲುಗು ಸ್ಟಾರ್ ನಟನ ಜೊತೆ ‘ರಾಧಾ ರಮಣ’ ಖ್ಯಾತಿಯ ದೀಪಿಕಾ ಮದುವೆ

anusha hegde e1582455155681

ಅನುಷಾ ‘ರಾಧಾ ರಮಣ’ ಧಾರಾವಾಹಿ ಮುಗಿದ ಮೇಲೆ ತೆಲುಗಿನ ‘ನಿನ್ನೆ ಪೆಳ್ಳಾಡಟ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಟನ ಜೊತೆ ಅನುಷಾ ಮದುವೆ ಆಗಿದ್ದಾರೆ. ಕಳೆದ ವರ್ಷ ತೆಲುಗಿನ ಖಾಸಗಿ ವಾಹಿನಿಯಲ್ಲಿ ಅವಾರ್ಡ್ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಗ್ ಶಾ ಅವಾರ್ಡ್ ಸ್ವೀಕರಿಸಿದ ಬಳಿಕ ಅನುಷಾ ಅವರನ್ನು ವೇದಿಕೆ ಮೇಲೆ ಬರಲು ಹೇಳಿದ್ದರು. ಬಳಿಕ ಪ್ರತಾಪ್ ವೇದಿಕೆಯಲ್ಲಿಯೇ ಅನುಷಾ ಬೆರಳಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದರು.

radha ramana anusha 14

ಪ್ರತಾಪ್ ಸಿಂಗ್ ರಜಪೂತ ಸಮುದಾಯದವರಾಗಿದ್ದು, ಹೈದರಾಬಾದ್‍ನಲ್ಲಿ ವಾಸಿಸುತ್ತಿದ್ದಾರೆ. ಪ್ರತಾಪ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅನುಷಾಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದ ಫೋಟೋವನ್ನು ಹಂಚಿಕೊಂಡು ಅತ್ಯುತ್ತಮ ಕ್ಷಣ ಎಂದು ಬರೆದುಕೊಂಡಿದ್ದರು. ಪ್ರತಾಪ್‍ರನ್ನು ಮದುವೆಯಾಗುವ ಮೂಲಕ ಮಂಗಳೂರಿನ ಬೆಡಗಿ ಅನುಷಾ ಹೈದರಾಬಾದ್‍ನ ರಜಪೂತ ಮನೆತನದ ಸೊಸೆ ಆಗಿದ್ದಾರೆ.

ಪ್ರತಾಪ್ ಸಿಂಗ್ ತೆಲುಗು ಕಿರುತೆರೆಯಲ್ಲಿ ಸ್ಟಾರ್ ನಟನಾಗಿದ್ದು, `ನಿನ್ನೆ ಪೆಳ್ಳಾಡಟ’ ಧಾರಾವಾಹಿಯಲ್ಲಿ ನಟಿಸುವಾಗ ಇಬ್ಬರು ಪ್ರೀತಿಸಲು ಶುರು ಮಾಡಿದ್ದರು. ಅನುಷಾ ಹಾಗೂ ಪ್ರತಾಪ್ ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಧಾರಾವಾಹಿ ತಂಡದ ಜೊತೆ ಹಂಚಿಕೊಂಡಿರಲಿಲ್ಲ. ತಮ್ಮ ಪ್ರೀತಿ ವಿಷಯವನ್ನು ಇಬ್ಬರು ಗುಟ್ಟಾಗಿ ಇಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *