ಸಾಮೂಹಿಕ ಅತ್ಯಾಚಾರಕ್ಕೆ ಮನನೊಂದು ಯುವತಿ ಆತ್ಮಹತ್ಯೆ

Public TV
1 Min Read
RAPE CASE

ಹೈದರಾಬಾದ್: ಪೊಲೀಸ್ ಪೇದೆ ಸೇರಿದಂತೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರಿಂದ 23 ವರ್ಷದ ಯುವತಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಈ ಕುರಿತಂತೆ ಮಹಬೂಬಾಬಾದ್ ಜಿಲ್ಲೆಯ ನೆಲ್ಲಿಕುದೂರು ಪೊಲೀಸ್ ಠಾಣೆಯಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಲಾಗಿದ್ದು, ಫೆಬ್ರವರಿ 16 ರಂದು ಸಂತ್ರಸ್ತೆ ರಾತ್ರಿ ತಂಗಲು ತನ್ನ ಸ್ನೇಹಿತೆಯ ಮನೆಗೆ ಹೋಗುವ ವೇಳೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಮತ್ತು ಫೆಬ್ರವರಿ 17 ರಂದು ಅದೇ ಸ್ನೇಹಿತೆಯನ್ನು ಭೇಟಿಯಾಗಲು ಹೋಗುವ ವೇಳೆ ಮತ್ತೊಮ್ಮೆ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಆಕೆ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧದ ದಾಳಿ ವಿಪತ್ಕಾರಕ ಜೀವಹಾನಿಗೆ ಕಾರಣವಾಗಬಹುದು: ಜೋ ಬೈಡೆನ್

crime

ಫೆಬ್ರವರಿ 18 ರಂದು ಮನೆಗೆ ಹಿಂದಿರುಗಿದ ಯುವತಿ ಬೆಳಗ್ಗೆ 8 ಗಂಟೆ ಸುಮಾರಿಗೆ ಸುಮಾರಿಗೆ ವಿಷ ಸೇವಿಸಿದ್ದಾಳೆ. ನಂತರ ಕೂಡಲೇ ಆಕೆಯ ಸಹೋದರ ಮಹಬೂಬಾಬಾದ್‍ನ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಂತ್ರಸ್ತೆ ಫೆಬ್ರವರಿ 22 ರಂದು ನಿಧನರಾಗಿದ್ದಾರೆ. ಫೆಬ್ರವರಿ 17 ಮತ್ತು 18 ರಂದು ನಾಲ್ವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರಿಂದ ವಿಷ ಸೇವಿಸಿರುವುದಾಗಿ ಹೇಳಿಕೊಂಡಿದ್ದಾರೆ.

Police Jeep 1 1

ಅರ್ಜಿಯ ವಿಚಾರಗಳ ಆಧಾರದ ಮೇಲೆ ಐಪಿಸಿ ಸೆಕ್ಷನ್ 34 ರೊಂದಿಗೆ 376 (ಡಿ), 306, 354 (ಡಿ) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಅಲ್ಲದೇ ಆರೋಪಿಗಳಲ್ಲಿ ಒಬ್ಬ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಮಂಡಲ ಪರಿಷತ್ ಪ್ರಾದೇಶಿಕ ಕ್ಷೇತ್ರದ (ಎಂಪಿಟಿಸಿ) ಸದಸ್ಯೆಯ ಪತಿ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಉಕ್ರೇನ್ ದೇಶವನ್ನೇ ಮೂರು ಭಾಗ ಮಾಡಿದ ರಷ್ಯಾ

ಇದೀಗ ಪೊಲೀಸರು ಮೂವರು ಆರೋಪಿಗಳನ್ನು ವಶಪಡಿಸಿಕೊಂಡಿದ್ದು, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಮತ್ತು ಸಂತ್ರಸ್ತೆಯ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *