Connect with us

Latest

ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ

Published

on

ಮೆಹಬೂಬ್‍ನಗರ್: ಟೊಮೆಟೋ ಚಟ್ನಿ ಮಾಡುವ ವೇಳೆ ಮಹಿಳೆಯೊಬ್ಬರು ಹಾವನ್ನೂ ಸೇರಿಸಿ ರುಬ್ಬಿದ ಘಟನೆ ತೆಲಂಗಾಣದ ವಾನಪರ್ತಿಯಲ್ಲಿ ನಡೆದಿದೆ.

ಹೌದು. ನಂಬಲು ವಿಚಿತ್ರವಾದ್ರೂ ಇದು ಸತ್ಯ. ಇಲ್ಲಿನ ಖಿಲ್ಲಾ ಘಾನ್‍ಪುರ್ ನಿವಾಸಿಯಾದ ಗೊಲ್ಲ ರಾಜಮ್ಮ ಎಂಬವರು ಟೊಮೆಟೋ ಚಟ್ನಿ ಮಾಡಲು ಸಿದ್ಧತೆ ಮಾಡಿಕೊಂಡಿದ್ರು. ಟೊಮೆಟೋವನ್ನ ಬೇಯಿಸಿ ಇತರೆ ಸಾಮಗ್ರಿಗಳನ್ನ ತೆಗೆದುಕೊಂಡು ಒರಳುಕಲ್ಲಿನ ಬಳಿ ರುಬ್ಬಲು ಅಣಿ ಮಾಡಿಕೊಂಡ್ರು. ಆದ್ರೆ ಒಳರುಕಲ್ಲಿನ ಒಳಗೆ ಹಾವು ಇದ್ದಿದ್ದನ್ನು ಗಮನಿಸದೆ ಚಟ್ನಿಗೆ ತಯಾರಿಸಿಕೊಂಡಿದ್ದ ಸಾಮಗ್ರಿಗಳನ್ನ ಹಾಕಿ ಹಾವನ್ನೂ ಸೇರಿಸಿ ರುಬ್ಬಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಪತ್ತೆಯಾಯ್ತು ಕಾಲು & ಉಗುರುಳ್ಳ ಹಾವು- ವಿಡಿಯೋ ನೋಡಿ

ಮೊದಲಿಗೆ ರಾಜಮ್ಮ, ಅವರ ಚಿಕ್ಕ ಮಗ ಮತ್ತು ಅವರ ಮಗಳು ಕೃಷ್ಣವೇಣಿ ಬೆಳಗ್ಗಿನ ತಿಂಡಿಗೆ ಚಟ್ನಿಯನ್ನ ಸೇವಿಸಿದ್ದಾರೆ. ನಂತರ ಜಮೀನಿನಲ್ಲಿದ್ದ ದೊಡ್ಡ ಮಗ ಸಾಯಿಗೆ ಊಟ ತೆಗೆದುಕೊಂಡು ಹೋಗಿದ್ದಾರೆ. ಊಟ ಮಾಡುವಾಗ ಸಾಯಿ ಹಾವಿನ ಬಾಲವನ್ನು ನೋಡಿ ಹೌಹಾರಿದ್ದಾರೆ. ನಂತರ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹಾವಿನ ಚಿಕ್ಕ ಚಿಕ್ಕ ಪೀಸ್‍ಗಳು ಇದ್ದಿದ್ದನ್ನು ನೋಡಿದ್ದಾರೆ.

ಇದನ್ನೂ ಓದಿ:  ಬಾಯಲ್ಲಿ ಇಲಿ ಹಿಡಿದು ಎಸಿಯಿಂದ ಕೆಳಗೆ ನೇತಾಡ್ತಿತ್ತು ಹಾವು- ವಿಡಿಯೋ ವೈರಲ್

ನಂತರ ಅಯ್ಯೋ ನಾವು ಚಟ್ನಿ ಜೊತೆ ಹಾವು ತಿಂದಿದ್ದೇವೆ ಎಂದು ತಿಳಿದು ಎದ್ನೋ ಬಿದ್ನೋ ಅಂತ ಆಸ್ಪತ್ರೆಗೆ ಓಡಿದ್ದಾರೆ. ವೈದ್ಯರು ಇವರನ್ನ ತಪಾಸಣೆ ಮಾಡಿದ್ದು, ಯಾವುದೇ ತೊಂದರೆಯಿಲ್ಲ ಅಂತ ತಿಳಿಸಿದ್ದಾರೆ. ಇನ್ಮುಂದೆ ಚಟ್ನಿ ಮಾಡುವಾಗ ಒಂದಲ್ಲ ಹತ್ತು ಬಾರಿ ಒರಳುಕಲ್ಲನ್ನ ನೋಡಿ, ಸ್ವಚ್ಛ ಮಾಡಿ, ರುಬ್ಬಬೇಕು ಅನ್ನೋದು ಆ ಮಹಿಳೆಗೆ ಈಗ ಅರ್ಥವಾಗಿರಬಹುದು.

https://www.youtube.com/watch?v=23e5Ur5e-qs

https://www.youtube.com/watch?v=lgah6v0kuQg

https://www.youtube.com/watch?v=k0FYf5MPdOU

ಇದನ್ನೂ ಓದಿ:ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ

Click to comment

Leave a Reply

Your email address will not be published. Required fields are marked *