ಹೈದರಾಬಾದ್: ನೋಟು ಕೊಟ್ಟರೆ ವೋಟು ಎಂದು ಮತದಾರರು ಹೇಳುವುದು ಸಾಮಾನ್ಯವಾಗಿಬಿಟ್ಟಿದೆ. ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ, ಕಠಿಣ ಕಾನೂನುಗಳಿಗೆ ಹೆದರಿ ತೆರೆಮರೆಯಲ್ಲಿ ಹಣ ನೀಡುವುದು ಮತ್ತು ಪಡೆಯುವುದು ನಡೆಯುತ್ತಿರುತ್ತದೆ. ಆದರೆ ತೆಲಂಗಾಣದಲ್ಲಿ ಬೀದಿಯಲ್ಲೇ ನಿಂತು ಮಹಿಳೆಯರು “ವೋಟು ಬೇಕಂದ್ರೆ ಹಣ ಕೊಡಿ” ಎಂದು ಬೀದಿಯಲ್ಲಿ ನಿಂತು ಜನಪ್ರತಿನಿಧಿಗಳಿಂದ ಬಹಿರಂಗ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
Advertisement
ತೆಲಂಗಾಣದ ಹುಜೂರಾಬಾದ್‍ನ ವಿಧಾನಸಭಾ ಕ್ಷೇತ್ರದ ಹಲವು ಕಡೆಗಳಲ್ಲಿ ಮತದಾರರು, ವಿಶೇಷವಾಗಿ ಮಹಿಳೆಯರು ಶನಿವಾರ ನಡೆಯಲಿರುವ ಉಪಚುನಾವಣೆಗೆ ಮೊದಲೇ ತಮ್ಮ ಅಮೂಲ್ಯ ಮತಕ್ಕಾಗಿ ಹಣ ನೀಡುವಂತೆ ಬಹಿರಂಗವಾಗಿಯೇ ಕೇಳುತ್ತಿದ್ದಾರೆ. ಇದನ್ನೂ ಓದಿ: ತರಕಾರಿ ಹಾರ ಧರಿಸಿ ಅಸೆಂಬ್ಲಿಗೆ ಸೈಕಲ್‍ನಲ್ಲಿ ತೆರಳಿದ ಪಾಕ್ ಸಚಿವ – ಫೋಟೋ ವೈರಲ್
Advertisement
ಮತಕ್ಕಾಗಿ ಎಲ್ಲಾ ಪಕ್ಷಗಳು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿವೆ. ಇದೇ ಸಂದರ್ಭದಲ್ಲಿ ಮತದಾರರು “ಇದು ನಮ್ಮ ಹಕ್ಕು, ನೀವು ನಮಗೆ ಹಣ ನೀಡಬೇಕು” ಎಂದು ಕೇಳುತ್ತಿದ್ದಾರೆ.
Advertisement
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿರುವ ಕಾರಣ ಮಾಜಿ ಆರೋಗ್ಯ ಸಚಿವ ಇಯಾತಲ ರಾಜೇಂದ್ರ ಅವರು ರಾಜೀನಾಮೆ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಉಪ ಚುನಾವಣೆ ಘೋಷಿಸಲಾಗಿದೆ. ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ ಲಘು ಹೃದಯಾಘಾತ
Advertisement
“ರಾಜಕಾರಣಿಗಳು ಬೇರೆ ಕಡೆ ಹಣ ಹಂಚುತ್ತಿದ್ದಾರೆ. ಆದರೆ ನಮಗೆ ನೀಡಿಲ್ಲ. ಕೆಲವರಿಗೆ ಹೇಳಿದಷ್ಟು ಪೂರ್ತಿ ಹಣ ನೀಡಿಲ್ಲ” ಎಂದು ಮಹಿಳೆಯರು ಪ್ರತಿಭಟನೆಯನ್ನೇ ನಡೆಸಿದ್ದಾರೆ.
ಕೆಲವು ಪಕ್ಷಗಳು ಹಣವನ್ನು ಹಂಚುತ್ತಿವೆ ಎಂಬ ಸುದ್ದಿ ಹರಿದಾಡಿದೆ. ಪರಿಣಾಮವಾಗಿ ರಂಗಪುರ್, ಕತ್ರಪಲ್ಲಿ, ಪೆದ್ದಪಾಪಯ್ಯ ಪಲ್ಲೆ ಗ್ರಾಮಗಳ ಮತದಾರರು ಹಣ ಸಿಗುತ್ತದೆಂದು ಕ್ಯೂ ನಿಂತಿದ್ದಾರೆ. ಆದರೆ ಯಾವುದೇ ರೀತಿಯ ಹಣ ವಿತರಣೆ ಆಗದ ಕಾರಣ ಮತದಾರರು ಪಕ್ಷಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ರಾಜಕೀಯ ನಾಯಕರು ಕೆಲವರಿಗೆ ಹಣ ನೀಡಿದ್ದಾರೆ. ಆದರೆ ನಮಗೆ ನೀಡಿಲ್ಲ. ನಾವೂ ಕೂಡ ಮತದಾರರು ಎಂದು ಮಹಿಳೆಯೊಬ್ಬರು ಮಾತನಾಡಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.