ಹೈದರಾಬಾದ್: ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (Srisailam Left Bank Canal) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ದಿನವೂ ರಕ್ಷಣಾ ಕಾರ್ಯ ಮುಂದುವರಿದಿದೆ.
ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ರ‍್ಯಾಟ್ ಹೊಲ್ ಪ್ರಯತ್ನದ ಬಳಿಕ ಸವಾಲಿನ ಕೆಲಸಕ್ಕೆ ರಕ್ಷಣಾ ತಂಡ ಮುಂದಾಗಿದೆ. ಕಾರ್ಮಿಕರು ಸಿಲುಕಿರುವ ಸ್ಥಳಕ್ಕೆ ತೆರಳಲು 10 ಅಡಿ ಎತ್ತರ ಮತ್ತು 10,000 ಘನ ಮೀಟರ್ ಆವೃತ್ತವಾಗಿರುವ ಕೆಸರನ್ನು ಹೊರತೆಗೆಯುವ ಸವಾಲಿನ ಕೆಲಸಕ್ಕೆ ರಕ್ಷಣಾ ತಂಡ ಕೈಹಾಕಿದೆ. ಇದನ್ನೂ ಓದಿ: Maha Kumbh Mela: ಮಹಾಶಿವರಾತ್ರಿಯಂದು ಕಡೆಯ ಅಮೃತಸ್ನಾನಕ್ಕೆ ಜಿಲ್ಲಾಡಳಿತ ಸಜ್ಜು
ಸುರಂಗದ ಒಳಗೆ ತಿರುವು ತೆಗೆದುಕೊಳ್ಳಲು ಸ್ಥಳಾವಕಾಶವಿಲ್ಲದೇ ಲಾರಿಗಳು ಒಳಗೆ ಹೋಗಿ ಕೆಸರು ಸಾಗಿಸಲು ಕಷ್ಟಕರವಾಗಿದೆ. ಸುರಂಗದ ಒಳಗಿದ್ದ ಟನಲ್ ಬೋರಿಂಗ್ ಮೆಷಿನ್ (ಟಿಬಿಎಂ)ಗೆ ಅಳವಡಿಸಲಾಗಿದ್ದ ಕನ್ವೇಯರ್ ಬೆಲ್ಟ್ ಹಾಳಾಗಿದ್ದು, ಬೆಲ್ಟ್ ಮೂಲಕ ಮಣ್ಣು ಸಾಗಿಸುವ ಆಯ್ಕೆ ಕೈ ತಪ್ಪಿದೆ. ಇದನ್ನೂ ಓದಿ: ಶ್ರೀಶೈಲಂ ಸುರಂಗ ಕುಸಿತ – ರಕ್ಷಣಾ ಕಾರ್ಯಕ್ಕೆ ಉತ್ತರಾಖಂಡದ ರ‍್ಯಾಟ್ ಮೈನರ್‌ಗಳ ಸಾಥ್
ಇನ್ನೂ ತೀವ್ರವಾಗಿ ಹಾನಿಗೊಳಗಾಗಿರುವ ಟಿಬಿಎಂ, ರಕ್ಷಣಾ ಕಾರ್ಯಾಚರಣೆಯ ತಂಡ ಅಂತಿಮ ಹಂತಕ್ಕೆ ಹೋಗುವ ಮಾರ್ಗಕ್ಕೆ ಅಡ್ಡಲಾಗಿದೆ. ಸುರಂಗದ ಮೂಲಕ ಕುಸಿದ ಪ್ರದೇಶವನ್ನು ತಲುಪುವಾಗ, ಮಣ್ಣು ಮತ್ತು ಕಾಂಕ್ರೀಟ್ ಅವಶೇಷಗಳನ್ನು ದಾಟುವುದು ಒಂದು ಸವಾಲಾಗಿದೆ. ಅಂತಿಮ ಹಂತದ 100 ಮೀಟರ್ ಮಣ್ಣು ತೆರವು ಮಾಡಿ ಸಂತ್ರಸ್ತರನ್ನು ಹುಡುಕುವುದು ಮತ್ತೊಂದು ಸವಾಲಾಗಿದೆ. ಮುಂದಿನ ಬೆಳವಣಿಗೆಯನ್ನು ಕಾದುನೋಡಬೇಕಿದೆ.
ಇತ್ತೀಚೆಗೆ ದೋಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾದ ಬಳಿಕ ಛಾವಣಿ ಕುಸಿದ ಘಟನೆ ನಡೆದಿದೆ. ಈ ವೇಳೆ ಕುಸಿತದಲ್ಲಿ 8 ಮಂದಿ ಕಾರ್ಮಿಕರು ಸಿಲುಕಿದ್ದು, 48 ಕಾರ್ಮಿಕರನ್ನು ರಕ್ಷಿಸಲಾಗಿತ್ತು. ಇದನ್ನೂ ಓದಿ: ಕೊಳಕು ಮನಸ್ಸಿಗೆ ʻಮೆದುಳಿನಲ್ಲಿ ಕಸʼವೇ ಕಾರಣವೇ? – ಇದಕ್ಕೆ ಪರಿಹಾರವೇನು?