ಹೈದರಾಬಾದ್: ತೆಲಂಗಾಣ ಸರ್ಕಾರವು 75ನೇ ಸ್ವಾತಂತ್ರ್ಯ ದಿನಾಚರಣೆಗೆ ಒಂದು ಕೋಟಿಗೂ ಹೆಚ್ಚು ರಾಷ್ಟ್ರಧ್ವಜಗಳನ್ನು ವಿತರಿಸಲಿದೆ.
ಈ ಬಾರಿಯ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತೆಲಂಗಾಣ ಸರ್ಕಾರವು “ಸ್ವತಂತ್ರ ಭಾರತ ವಜ್ರೋತ್ಸವ ದ್ವಿ ಸಪ್ತಾಹಮ್” ಅನ್ನು ಎರಡು ವಾರಗಳವರೆಗೆ ಆಚರಿಸಲಿದ್ದು, 1.20 ಕೋಟಿ ರಾಷ್ಟ್ರಧ್ವಜಗಳನ್ನು ಹಾರಿಸಲು ನಿರ್ಧರಿಸಿದೆ. ಹೀಗಾಗಿ 7 ದಿನಕ್ಕೂ ಮುನ್ನವೇ 1.20 ಕೋಟಿ ರಾಷ್ಟ್ರಧ್ವಜಗಳನ್ನು ವಿತರಿಸಲಿದೆ. ಇದನ್ನೂ ಓದಿ: ಸಂಚಾರ ದಟ್ಟಣೆ ತಡೆಗೆ ಟ್ರಾಫಿಕ್ ಡೈವರ್ಟ್- ವರ್ಕೌಟ್ ಆಗ್ತಿಲ್ಲ ಅಂತಿದ್ದಾರೆ ಸವಾರರು!
ಶನಿವಾರ ಈ ಕುರಿತಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು, ರಾಷ್ಟ್ರಭಕ್ತಿಯನ್ನು ತಿಳಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಮತ್ತು ಸ್ವಾತಂತ್ರ್ಯ ಹೋರಾಟದಿಂದ ಸಿಕ್ಕ ಫಲಗಳನ್ನು ಹೊಸ ಪೀಳಿಗೆಗೆ ತಿಳಿಸಬೇಕು. ರಾಜ್ಯದ ಪ್ರತಿಯೊಂದು ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು. ಅದಕ್ಕಾಗಿ 1.20 ಕೋಟಿ ತ್ರಿವರ್ಣ ಧ್ವಜಗಳನ್ನು ನೀಡಲಾಗುವುದು. ಮನೆ ಮನೆಗೆ ಧ್ವಜಾರೋಹಣ, ಕ್ರೀಡಾಕೂಟಗಳು, ಪ್ರಬಂಧ ರಚನೆ, ಕವಿ ಸಮ್ಮೇಳನ (ಕವಿಗಳ ಕೂಟ) ಮತ್ತು ರಾಷ್ಟ್ರೀಯತೆಯನ್ನು ಸಾರಲು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇಂದಿನ ಪೀಳಿಗೆಯವರಿಗೆ ಸ್ವಾತಂತ್ರ್ಯ ಹೋರಾಟ, ತ್ಯಾಗ, ಅಂದಿನ ರಾಷ್ಟ್ರ ನಾಯಕರು ಹಾಗೂ ಹೋರಾಟದಲ್ಲಿ ಹುತಾತ್ಮರಾದವರ ಬಗ್ಗೆ ಅರಿವು ಮೂಡಿಸಬೇಕು. ಪ್ರತಿಯೊಬ್ಬ ತೆಲಂಗಾಣ ಪ್ರಜೆಯು ವಜ್ರಮಹೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳಬೇಕು. ಸ್ವಾತಂತ್ರ್ಯ ದಿನವನ್ನು ಹಳ್ಳಿಯಿಂದ ಪಟ್ಟಣಕ್ಕೆ ಮತ್ತು ಭಾರತದ ವೈಭವದ ಸಂದೇಶವನ್ನು ಏಕ ಭಾರತವಾಗಿ ಹರಡಿ ಎಂದಿದ್ದಾರೆ. ಇದನ್ನೂ ಓದಿ: 75 ದೇಶಗಳಲ್ಲಿ ಮಂಕಿಪಾಕ್ಸ್ – ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ WHO
ಗದ್ವಾಲ್, ನಾರಾಯಣಪೇಟೆ, ಸಿರಿಸಿಲ್ಲಾ, ಪೋಚಂಪಲ್ಲಿ, ಭೋಂಗೀರ್ ಮತ್ತು ವಾರಂಗಲ್‍ನ ಕೈಮಗ್ಗ ಮತ್ತು ಪವರ್ ಲೂಮ್ ಕಾರ್ಮಿಕರಿಗೆ ಧ್ವಜಗಳನ್ನು ತಯಾರಿಸಲು ಆದೇಶಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.