ಹೈದರಾಬಾದ್: ಪ್ರಿಯಕರ ಮತ್ತು ಆತನ ಇಬ್ಬರು ಗೆಳೆಯರಿಂದ ಅತ್ಯಾಚಾರಗೊಳಗಾದ ಯುವತಿ ಕಾಮುಕರ ವಿರುದ್ಧ ದೂರು ದಾಖಲಿಸಿದ್ದಾಳೆ. ತೆಲಂಗಾಣದ ಪೆದ್ದಪಲ್ಲಿಯ ಬೊಮ್ಮಪಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. 24 ವರ್ಷದ ಪ್ರಿಯಕರ ಮತ್ತು ಆತನ ಗೆಳೆಯರು 10 ತಿಂಗಳು ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಕೊಟ್ಟೆ ರಂಜಿತ್ ಎಂಬಾತನೇ ಪ್ರಕರಣದ ಪ್ರಮುಖ ಆರೋಪಿ. ರಂಜಿತ್ ಮತ್ತು ಯುವತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ವಿವಾಹಕ್ಕೂ ಮೊದಲೇ ರಂಜಿತ್ ಮತ್ತು ಯುವತಿ ದೈಹಿಕ ಸಂಪರ್ಕ ಹೊಂದಿದ್ದರು. ರಂಜಿತ್ ಮಾತ್ರವಲ್ಲದೇ ಆತನ ಇಬ್ಬರು ಗೆಳೆಯರಾದ ಸತೀಶ್ (23) ಮತ್ತು ವೈಕುಂಠಂ (24) ಎಂಬವರು 10 ತಿಂಗಳು ಅತ್ಯಾಚಾರ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಇತ್ತೀಚೆಗೆ ಗರ್ಭಿಣಿಯಾಗಿದ್ದ ಯುವತಿಗೆ ಗರ್ಭಪಾತವಾಗಿತ್ತು. ರಂಜಿತ್ ಬಲಿ ತೆರಳಿದ ಯುವತಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಮದುವೆಗೆ ಒಪ್ಪದ ರಂಜಿತ್ ಬೆದರಿಕೆಯನ್ನು ಹಾಕಿದ್ದಾನೆ. ಕೊನೆಗೆ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
Advertisement
ಈ ಸಂಬಂಧ ಸೆಕ್ಷನ್ 376(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv