ಹೈದರಾಬಾದ್: ತೆಲಂಗಾಣ ರಾಜ್ಯದ ವಿಧಾನಸಭಾ ಸ್ಪೀಕರ್ ಪೋಚರಂ ಶ್ರೀನಿವಾಸ್ ರೆಡ್ಡಿ ಅವರಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ.
Advertisement
ಐದು ದಿನಗಳ ಹಿಂದೆ ತನ್ನ ಮೊಮ್ಮಗಳ ವಿವಾಹ ಕಾರ್ಯಕ್ರಮದಲ್ಲಿ ಪೋಚರಂ ಅವರು ಪಾಲ್ಗೊಂಡಿದ್ದರು. ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಸಹ ಸ್ಪೀಕರ್ ಜೊತೆಯಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮೂವರು ಪಕ್ಕಪಕ್ಕದಲ್ಲೇ ಕುಳಿತಿದ್ದರು. ಆದರೆ ಮಾಸ್ಕ್ ಧರಿಸಿರಲಿಲ್ಲ. ಇದನ್ನೂ ಓದಿ: ರೈತರ ಹೋರಾಟಕ್ಕೆ ವರ್ಷ, ದುರಂಹಾಕರ, ದೌರ್ಜನ್ಯಕ್ಕೆ ಬಿಜೆಪಿ ಹೆಸರುವಾಸಿ: ಪ್ರಿಯಾಕಾ ವಾದ್ರಾ
Advertisement
ಈ ಮೂವರು ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿರುವ ಚಿತ್ರದಲ್ಲಿ, ಜಗನ್ ಮೋಹನ್ ರೆಡ್ಡಿ ಅವರು ಮಧ್ಯದಲ್ಲಿ ಕುಳಿತಿದ್ದಾರೆ. ರೆಡ್ಡಿ ಅವರ ಎಡ ಹಾಗೂ ಬಲ ಭಾಗದಲ್ಲಿ ತೆಲಂಗಾಣ ಸಿಎಂ ಮತ್ತು ಸ್ಪೀಕರ್ ಕುಳಿತು ಮಾತನಾಡುತ್ತಿದ್ದಾರೆ. ಇದನ್ನೂ ಓದಿ: ಮದುವೆಗೆ 1 ಲಕ್ಷ ರೂ. ವೆಚ್ಚದ ಮಹಂದಿ ಬಳಸ್ತಿದ್ದಾರಂತೆ ಕತ್ರಿನಾ!
Advertisement
Advertisement
ವಿವಾಹ ಕಾರ್ಯಕ್ರಮದಲ್ಲಿ ವಿಐಪಿಗಳು ಹಾಗೂ ರಾಜಕಾರಣಿಗಳು ಭಾಗವಹಿಸಿದ್ದರು. ಸ್ಪೀಕರ್‍ಗೆ ಕೋವಿಡ್ ದೃಢಪಟ್ಟಿರುವುದು ತಿಳಿದ ನಂತರ ಹಲವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.