ಹೈದರಾಬಾದ್: 4 ವರ್ಷದ ಬಾಲಕಿ ಮೇಲೆ ಎರಡು ತಿಂಗಳ ಕಾಲ ಶಾಲೆ ಪ್ರಾಂಶುಪಾಲರ (Principal) ಚಾಲಕ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಖಾಸಗಿ ಶಾಲೆಗೆ (Private School) ನೀಡಿರುವ ಸರ್ಕಾರಿ ಮಾನ್ಯತೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ತೆಲಂಗಾಣದ ಶಿಕ್ಷಣ ಸಚಿವೆ ಸಬಿತಾ ಇಂದ್ರಾ ರೆಡ್ಡಿ (Sabitha Indra Reddy) ಆದೇಶಿಸಿದ್ದಾರೆ.
Advertisement
ಇದರೊಂದಿಗೆ ಶಿಕ್ಷಣ ಕಾರ್ಯದರ್ಶಿ, ಶಾಲಾ ಶಿಕ್ಷಣ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ (Women and Child Welfare Department) ಇಲಾಖೆ ಕಾರ್ಯದರ್ಶಿ, ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆಗೆ ವ್ಯವಹರಿಸುವ ಹಿರಿಯ ಅಧಿಕಾರಿಗಳನ್ನ ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಇಂತಹ ಘಟನೆಗಳು ಮರುಕಳಿಸದಂತೆ ಯಾವೆಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಬಹುದು ಅನ್ನೋ ಬಗ್ಗೆ ಒಂದು ವಾರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
Advertisement
Advertisement
ಆದರೆ ಈ ಶಾಲೆಯಲ್ಲಿ ಒಟ್ಟು 700 ವಿದ್ಯಾರ್ಥಿಗಳು (Students) ಓದುತ್ತಿದ್ದು, ಮಧ್ಯ ವಾರ್ಷಿಕ ಸಂದರ್ಭದಲ್ಲಿ ಸೀಟುಗಳನ್ನು ಹುಡುಕುವುದು ದೊಡ್ಡ ಸವಾಲಾಗಿದೆ. ಇದನ್ನೂ ಓದಿ: ನಿಮ್ಮ ಬಳಿ ಬಟ್ಟೆ ಹಾವಿದ್ರೆ, ನನ್ನ ಬಳಿ ನಿಜವಾದ ಹಾವಿದೆ: ಬಿಜೆಪಿ ನಾಯಕರಿಗೇ ಯತ್ನಾಳ್ ಟಾಂಗ್
Advertisement
ನಾಲ್ಕು ವರ್ಷದ ಮಗುವಿನ ಮೇಲೆ ಕಳೆದ ಎರಡು ತಿಂಗಳಿನಿಂದ ಅತ್ಯಾಚಾರ ಎಸಗಿದ ಆರೋಪದ ಮೇಲೆ ಎರಡು ದಿನಗಳ ಹಿಂದೆಯಷ್ಟೇ ಇಲ್ಲಿನ ಬಂಜಾರ ಹಿಲ್ಸ್ ಶಾಲೆಯ (Banjara Hills School) ಪ್ರಾಂಶುಪಾಲರ ಚಾಲಕನನ್ನು ಬಂಧಿಸಲಾಯಿತು. ಮೊದಲು ಆರೋಪ ಕೇಳಿಬಂದರೂ ಪ್ರಾಂಶುಪಾಲರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೋಷಕರು ಉಗ್ರ ಪ್ರತಿಭಟನೆ ನಡೆಸಿದ ನಂತರ ಆರೋಪಿಯನ್ನು ಬಂಧಿಸಲಾಯಿತು. ವಿಷಯ ಬಹಿರಂಗಗೊಂಡ ಬಳಿಕ ಶಾಲೆಯನ್ನು ಮುಚ್ಚಲಾಗಿದೆ. ಇದನ್ನೂ ಓದಿ: ಲೋಕಾಯುಕ್ತ ಐಜಿಪಿಯಾಗಿ ಸುಬ್ರಹ್ಮಣ್ಯೇಶ್ವರ ರಾವ್ ನೇಮಕ
ಸದ್ಯ ಶಾಲೆಯನ್ನು ಮುಚ್ಚುವ ಜೊತೆಗೆ ಮಕ್ಕಳ ಸುರಕ್ಷತೆಗೆ ಶಾಲಾ ಆಡಳಿತ ಮಂಡಳಿಗಳು ಕ್ರಮ ಕೈಗೊಳ್ಳಲು ಬಲವಾದ ಮಾರ್ಗಸೂಚಿಗಳನ್ನು ನೀಡಲು ಸಚಿವರು ಸೂಚಿಸಿದ್ದಾರೆ. ಜೊತೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಸಚಿವ ರಾಮಾರಾವ್ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.