CrimeLatestMain PostNational

ಗರ್ಭಿಣಿ ಪತ್ನಿಗೆ ಟಾಯ್ಲೆಟ್ ಕ್ಲೀನರ್ ಆ್ಯಸಿಡ್ ಕುಡಿಸಿ ಕೊಂದ ಪಾಪಿ ಪತಿ

ಹೈದರಾಬಾದ್: ಗರ್ಭಿಣಿ ಪತ್ನಿಗೆ ಬಲವಂತವಾಗಿ ಶೌಚಾಲಯ ಸ್ವಚ್ಛಗೊಳಿಸುವ ಆ್ಯಸಿಡ್ ಕುಡಿಸಿ ಪತಿಯೇ ಕೊಂದಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಏಪ್ರಿಲ್ 27 ರಂದು ನಿಜಾಮಾಬಾದ್‍ನ ವರ್ಣಿ ಮಂಡಲದ ರಾಜಪೇಟ್ ತಾಂಡಾದಲ್ಲಿ ಈ ಘಟನೆ ನಡೆದಿದ್ದು, ಘಟನೆ ನಂತರ ಆರೋಪಿ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: PSI ನೇಮಕಾತಿ ಅಕ್ರಮ ಪ್ರಕರಣದ ಕ್ವೀನ್‍ಪಿನ್ ದಿವ್ಯಾ ಹಾಗರಗಿ ಅರೆಸ್ಟ್

ಮೃತ ದುರ್ದೈವಿಯನ್ನು ಕಲ್ಯಾಣಿ ಎಂದು ಗುರುತಿಸಲಾಗಿದ್ದು, ಆರೋಪಿ ತರುಣ್ ಹಾಗೂ ಕಲ್ಯಾಣಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೂರು ತಿಂಗಳ ಹಿಂದೆ ಕಲ್ಯಾಣಿ ಗರ್ಭಿಣಿಯಾದ ಬಳಿಕ ತರುಣ್ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ನೀನು ನೋಡಲು ಚೆನ್ನಾಗಿಲ್ಲ, ಕುಟುಂಬಸ್ಥರಿಂದ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಸದಾ ಪೀಡಿಸುತ್ತಿದ್ದನು.

CRIME 2

ಇದೇ ರೀತಿ ಮಂಗಳವಾರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ತರುಣ್ ಕಲ್ಯಾಣಿಗೆ ಶೌಚಾಲಯ ಕ್ಲೀನಿಂಗ್ ಲಿಕ್ವಿಡ್‍ ಬಲವಂತವಾಗಿ ಕುಡಿಸಿದ್ದಾನೆ ಎನ್ನಲಾಗುತ್ತಿದೆ. ಇದರಿಂದ ತೀವ್ರ ಅಸ್ವಸ್ಥಳಾಗಿದ್ದ ಕಲ್ಯಾಣಿಯನ್ನು, ಆಕೆಯ ಕುಟುಂಬಸ್ಥರು ಚಿಕಿತ್ಸೆಗಾಗಿ ನಿಜಾಮಾಬಾದ್‍ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಕಲ್ಯಾಣಿ ಬುಧವಾರ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಕೆಕೆಆರ್‌ಗೆ ಪಂಚ್‌ ಕೊಟ್ಟ ಪೋವೆಲ್‌- ಡೆಲ್ಲಿ ತಂಡಕ್ಕೆ 4 ವಿಕೆಟ್‌ಗಳ ಜಯ

ಇದೀಗ ಕಲ್ಯಾಣಿ ಕುಟುಂಬಸ್ಥರು ತರುಣ್ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಶೌಚಾಲಯ ಸ್ವಚ್ಛಗೊಳಿಸುವ ದ್ರವ ಕುಡಿಸಿ ಹತ್ಯೆಗೈದಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ತರುಣ್ ಮತ್ತು ಆತನ ಕುಟುಂಬದ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 304-ಬಿ ಮತ್ತು 498-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published.

Back to top button