ಹೈದರಾಬಾದ್: ಮಹಿಳೆಯರು ಸೀರೆ ಪ್ರಿಯರು, ಆಫರ್ ಇದ್ದರೆ ಸಾಕು ಮಳಿಗೆಗೆ ಮುಗಿಬಿದ್ದು ಖರೀದಿಸುತ್ತಾರೆ. ಇಂತದ್ದೇ ಪ್ರಸಂಗವೊಂದು ತೆಲಂಗಾಣದ ಹೈದರಾಬಾದ್ ಮಾಲ್ನಲ್ಲಿ ನಡೆದಿದ್ದು, ನೂಕುನುಗ್ಗಲಿಗೆ ಸುಮಾರು 15 ಜನ ಗಾಯಗೊಂಡಿದ್ದಾರೆ.
ಹೈದರಾಬಾದ್ ನಗರದ ಸಿದ್ದಿಪೇಟೆಯ ಸಿಎಂಆರ್ ಮಾಲ್ನಲ್ಲಿ ಕೇವಲ 10 ರೂ. ಒಂದು ಸೀರೆ ಎಂದು ಆಫರ್ ಕೊಡಲಾಗಿತ್ತು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಮಹಿಳೆಯರು, ಯುವತಿಯರು, ಯುವಕರು, ವೃದ್ಧರು ಸೇರಿದಂತೆ ಸಾವಿರಾರು ಮಂದಿ ಮಾಲ್ ಒಳಗೆ ನುಗ್ಗಿದ್ದಾರೆ. ಪರಿಣಾಮ ಕಾಲ್ತುಳಿತಕ್ಕೆ ಸಿಕ್ಕು ಕೆಲವರು ಗಾಯಗೊಂಡಿದ್ದಾರೆ.
Advertisement
Advertisement
ಸೀರೆ ಖರೀದಿಸಲು ಮಾಲ್ಗೆ ಬಂದಿದ್ದ ಮಹಿಳೆಯೊಬ್ಬರು 5 ಚಿನ್ನದ ಸರ, 6 ಸಾವಿರ ನಗದು ಹಾಗೂ ಡೆಬಿಟ್ ಕಾರ್ಡ್ ಕಳೆದುಕೊಂಡಿದ್ದಾರೆ. ಈ ಸಂಬಂಧ ಮಹಿಳೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Advertisement
ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಮಾಲ್ ಬಾಗಿಲನ್ನು ಮುರಿದು ಹೊರಬಂದಿದ್ದಾರೆ. ಈ ವೇಳೆ ತಳ್ಳಾಟವಾಗಿದ್ದು, ಕೆಲವರು ಕೆಳಗೆ ಬಿದ್ದು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
Advertisement
Telangana- Stampede at CMR showroom in Siddipet. The store had a special offer- a saree for rupees 10 only.! Crowd just barged in as the gates opened. Reportedly more than 15 people were injured and a woman also a gold chain, which was snatched from her neck. #Telangana pic.twitter.com/4x0gNFw0AE
— Rishika Sadam (@RishikaSadam) February 16, 2019
ಮಾಲ್ನ ನಿಷ್ಕಾಳಜಿಯಿಂದಾಗಿಯೇ ಘಟನೆ ನಡೆದಿದೆ ಎಂದು ಆರೋಪಿಸಿರುವ ಪೊಲೀಸರು, ಮಾಲ್ನ ಮ್ಯಾನೇಜರ್ ನನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv