ಹೈದರಾಬಾದ್: ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಸೇರಿದಂತೆ ಎಲ್ಲಾ ಕೋವಿಡ್-19 ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
ವಯಸ್ಸಾದವರು, ಗರ್ಭಿಣಿಯರನ್ನು ಹೊರತುಪಡಿಸಿ ಉಳಿದವರು ಮಾಸ್ಕ್ ಧರಿಸುವುದು ಅವರ ಆಯ್ಕೆಯಾಗಿದೆ. ತೆಲಂಗಾಣದಲ್ಲಿ ಕೋವಿಡ್ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಪ್ರತಿದಿನ 50 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ ಎಂದು ಸಾರ್ವಜನಿಕ ಆರೋಗ್ಯದ ರಾಜ್ಯ ನಿರ್ದೇಶಕ ಜಿ ಶ್ರೀನಿವಾಸ ರಾವ್ ಹೇಳಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮುಂಬೈನಲ್ಲಿ ಮಾಸ್ಕ್ ಕಡ್ಡಾಯವಲ್ಲ
Advertisement
Advertisement
ಮಾರ್ಚ್ 2020 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡ್ತಿದ್ದಂತೆ ಸುಮಾರು ಎರಡು ವರ್ಷಗಳ ನಂತರ ಕೋವಿಡ್ 19 ನಿರ್ಬಂಧಗಳನ್ನು ಹಂತ ಹಂತವಾಗಿ ಹಿಂತೆದುಕೊಳ್ಳಲಾಗ್ತಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ
Advertisement
Advertisement
ಕೊರೊನಾ ವೈರಸ್ ರೋಗಕ್ಕೆ ಸಂಬಂಧಿಸಿದ ಎಲ್ಲಾ ನಿಬರ್ಂಧಗಳನ್ನು ತೆಗೆದುಹಾಕಲಾಗುವುದು ಎಂದು, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಗುರುವಾರ ಘೋಷಿಸಿದ ಒಂದು ದಿನದ ನಂತರ ಕೋವಿಡ್ -19 ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಲು ತೆಲಂಗಾಣ ಸರ್ಕಾರದ ನಿರ್ಧರಿಸಿದೆ. ದೆಹಲಿ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಕಡ್ಡಾಯವಾಗಿ ಧರಿಸುವುದನ್ನು ತೆಗೆದುಹಾಕಲು ನಿನ್ನೆ ನಿರ್ಧರಿಸಿದೆ.