ಹೈದರಾಬಾದ್: ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಬಹುನಿರೀಕ್ಷಿತ ಜಾತಿ ಆಧಾರಿತ ಗಣತಿ (Caste Survey) ಕಾರ್ಯ ಆರಂಭಿಸಿದೆ.
Telangana has embarked on a revolutionary journey today with the commencement of enumeration for caste survey.
The promise of our leader
Shri @RahulGandhi ji of social justice to all weaker sections is going to be a reality in Telangana on the basis of above exercise.
This day… https://t.co/p7Sovyyfbp
— Revanth Reddy (@revanth_anumula) November 9, 2024
ಇದೊಂದು ಐತಿಹಾಸಿಕ ಮತ್ತು ಕ್ರಾಂತಿಕಾರಿ ಕ್ಷಣ ಅಂತ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ (Jairam Ramesh) ಬಣ್ಣಿಸಿದ್ದಾರೆ. ಇದನ್ನೂ ಓದಿ: ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ‘ಲಕ್ಕಿ’ ಕಾರ್ ಸಮಾಧಿ – ಅಂತ್ಯಸಂಸ್ಕಾರಕ್ಕೆ 4 ಲಕ್ಷ ಖರ್ಚು, 1,500 ಮಂದಿ ಭಾಗಿ
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಮುಂದಿನ ಕೆಲವು ವಾರಗಳಲ್ಲಿ 80,000 ಗಣತಿದಾರರು ಮನೆ ಮನೆಗಳಿಗೆ ತೆರಳಿ ಜಾತಿ ಗಣತಿ ಕಾರ್ಯ ಮಾಡಲಿದ್ದಾರೆ. 33 ಜಿಲ್ಲೆಗಳಲ್ಲಿ 1.17 ಕೋಟಿ ಕುಟುಂಬಗಳನ್ನು ಗಣತಿ ಮಾಡಲಿದ್ದಾರೆ ಅಂತ ತಿಳಿಸಿದ್ದಾರೆ.
1931 ರಿಂದ ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಜಾತಿ ಆಧಾರಿತ ಗಣತಿ ಕಾರ್ಯ ನಡೀತಿದೆ. ರಾಹುಲ್ ಗಾಂಧಿ ಹೇಳಿದಂತೆ ಜಾತಿಗಣತಿ ನಡೀತಿದ್ದು, ಇದು ದೇಶದ ಜಾತಿಗಣತಿಯ ನೀಲನಕ್ಷೆಯಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್
ಜಾತಿಗಣತಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗಿರುವ ಶೇ.50 ರಷ್ಟು ಮೀಸಲಾತಿಯ ಸುಪ್ರೀಂ ಕೋರ್ಟ್ ನಿರ್ಬಂಧವನ್ನು ರದ್ದುಗೊಳಿಸುವ ಕಾಂಗ್ರೆಸ್‌ಗೆ ದೂರ ದೃಷ್ಟಿಗೆ ಕೇಂದ್ರವಾಗಿದೆ ಅಂತಲೂ ಜೈರಾಮ್ ರಮೇಶ್ ಬಣ್ಣಿಸಿದ್ದಾರೆ. ಇದನ್ನೂ ಓದಿ: ನೀಟ್ ಆಕಾಂಕ್ಷಿಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ತಿಂಗಳಾನುಗಟ್ಟಲೆ ರೇಪ್, ಬ್ಲ್ಯಾಕ್‌ಮೇಲ್ – ಕಾಮುಕರು ಅರೆಸ್ಟ್