LatestMain PostNational

ಕೆಸಿಆರ್ ಅಭಿಮಾನಿಯ ಕನಸು ನನಸು – 9 ವರ್ಷದ ಬಳಿಕ ಮಗಳ ನಾಮಕರಣ

ಹೈದರಾಬಾದ್: ಹೆಸರೇ ಇಲ್ಲದ ಒಂಬತ್ತು ವರ್ಷದ ತೆಲಂಗಾಣದ (Telangana) ಬಾಲಕಿ ತನ್ನ ಪೋಷಕರೊಂದಿಗೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (Chief Minister K Chandrashekar Rao) ಅವರನ್ನು ಭೇಟಿಯಾಗಿ ಕೊನೆಗೂ ನಾಮಕರಣ ಮಾಡಿಸಿಕೊಂಡಿದ್ದಾಳೆ.

ಸುರೇಶ್ ( Suresh) ಮತ್ತು ಅನಿತಾ (Anitha) ದಂಪತಿ ಜನಪ್ರಿಯ ನಾಯಕ ಚಂದ್ರಶೇಖರ್ ರಾವ್ ಅವರ ನೇತೃತ್ವದ ತೆಲಂಗಾಣ ರಾಜ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 2013ರಲ್ಲಿ ತಮ್ಮ ಮಗಳು ಜನಿಸಿದಾಗ ಆಕೆಗೆ ಕೆಸಿಆರ್ ಅವರೇ ಹೆಸರಿಡಬೇಕೆಂದು ಬಯಸಿದ್ದರು. ಆದರೆ ಒಂಬತ್ತು ವರ್ಷಗಳ ಕಾಲ ಈ ಆಸೆ ಈಡೇರಲಿಲ್ಲ. ಆದರೆ ಇದೀಗ ಕಾಲಗೂಡಿ ಬಂದಿದ್ದು, ಕೊನೆಗೂ ಬಾಲಕಿಗೆ ಹೆಸರು ಇಡಲಾಗಿದೆ. ಇದನ್ನೂ ಓದಿ: ಹಾಡಹಗಲೇ ವಕೀಲೆ ಮೇಲೆ ದುಷ್ಕರ್ಮಿಯಿಂದ ಕುಡುಗೋಲಿನಲ್ಲಿ ಅಟ್ಯಾಕ್

ತೆಲಂಗಾಣ ರಾಷ್ಟ್ರ ಸಮಿತಿಯ (Telangana Rashtra Samithi ) ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಅಸೆಂಬ್ಲಿ ಸ್ಪೀಕರ್ ಮಧುಸೂಧನ ಚಾರಿ (Madhusudhana Chary) ಅವರಿಗೆ ಇತ್ತೀಚೆಗೆ ಈ ವಿಚಾರ ತಿಳಿದುಬಂದಿದ್ದು, ನಂತರ ದಂಪತಿ ಮತ್ತು ಅವರ ಪುತ್ರಿಯನ್ನು ತೆಲಂಗಾಣ ಮುಖ್ಯಮಂತ್ರಿಯ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ(Pragathi Bhavan) ಆಹ್ವಾನಿಸಿದ್ದಾರೆ.

ವಿಷಯ ತಿಳಿದ ಮುಖ್ಯಮಂತ್ರಿ ಕೆಸಿಆರ್ ದಂಪತಿ, ಸುರೇಶ್ ಮತ್ತು ಅನಿತಾ ಅವರನ್ನು ಅಭಿನಂದಿಸಿ, ಅವರ ಪುತ್ರಿಗೆ ಮಹತಿ (Mahati) ಎಂದು ನಾಮಕರಣ ಮಾಡಿದರು. ದಂಪತಿ ಮತ್ತು ಅವರ ಮಗಳಿಗೆ ಉಡುಗೊರೆ ನೀಡಿದರು. ಅಲ್ಲದೇ ಮಹತಿಯ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದರು.  ಇದನ್ನೂ ಓದಿ: ಸುಮಲತಾ ಹೇಳಿದ ದಿನ ಆಣೆ ಮಾಡಲು ರೆಡಿ- ಮೇಲುಕೋಟೆ ಸನ್ನಿಧಿಯಲ್ಲಿ ಪುಟ್ಟರಾಜು ಸವಾಲು ಸ್ವೀಕಾರ

Live Tv

Leave a Reply

Your email address will not be published.

Back to top button