ನವದೆಹಲಿ: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಎನ್‍ಕೌಂಟರ್ ಪ್ರಕರಣ ಒಂದು ಯೋಜಿತ ಕೊಲೆ ಎಂದು ಮಾನವಹಕ್ಕುಗಳ ಸಂಸ್ಥೆ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್’ (ಪಿಯುಸಿಎಲ್) ಆರೋಪ ಮಾಡಿ, 4 ಪ್ರಶ್ನೆಗಳನ್ನು ಮುಂದಿಟ್ಟಿದೆ.
ಪೊಲೀಸರ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಮಾನವಹಕ್ಕುಗಳ ಸಂಸ್ಥೆ ಮಾತ್ರ ಪ್ರಕರಣಕ್ಕೆ ಸಂಬಂಧಸಿದಂತೆ 4 ಪ್ರಶ್ನೆಗಳನ್ನು ಮುಂದಿಟ್ಟಿದೆ.
Advertisement
Advertisement
1.ಅಪರಾಧದ ದೃಶ್ಯವನ್ನು ಮರುಸೃಷ್ಟಿ ಮಾಡಲು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಅದು 50ಕ್ಕೂ ಹೆಚ್ಚು ಮಂದಿ ತೆಲಂಗಾಣ ಪೊಲೀಸ್ ನೇತೃತ್ವದಲ್ಲಿ ಏಕೆ ನಡೆಸಲಾಯಿತು?
Advertisement
2. ಆರೋಪಿಗಳನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಅವರು ಯಾವುದೇ ಶಸ್ತ್ರಗಳನ್ನು ಹೊಂದಿರಲಿಲ್ಲ. ಅಲ್ಲದೇ ಆರೋಪಿಗಳ ಕೈಗೆ ಕೊಳ ಹಾಕಿ, ಮುಖವನ್ನು ಮುಚ್ಚಿ ಘಟನಾ ಸ್ಥಳಕ್ಕೆ ಕರೆತರಲಾಗಿತ್ತು. ಈ ಮಾರ್ಗ ಬಿಟ್ಟರೇ ಅವರನ್ನು ಕ್ರೈಂ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಲು ಬೇರೆ ದಾರಿಯೇ ಇರಲಿಲ್ಲ. ಆದರೆ ಅವರು ಹೇಗೆ ಪೊಲೀಸರಿಂದ ತಪ್ಪಿಸಿಕೊಂಡು ಅಷ್ಟು ದೂರ ಹೋಗಲು ಸಾಧ್ಯ? ಇದನ್ನು ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ
Advertisement
3. ಆರೋಪಿಗಳ ಮೇಲೆ ಗುಂಡು ಹಾರಿಸಲು ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರಾ? ನಾಲ್ವರು ಆರೋಪಿಗಳ ಎನ್‍ಕೌಂಟರ್ ಮಾಡಲು ಅವರು ಮಾಡಿದ ಪ್ರಚೋದನೆ ಆದರೂ ಏನು? ಇದನ್ನು ಓದಿ: ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು: ಆರೋಪಿ ತಂದೆ
4. ಆರೋಪಿಗಳು ಯಾವುದೇ ಶಸ್ತ್ರ ಹೊಂದಿರಲಿಲ್ಲ. ಒಂದೊಮ್ಮೆ ಪೊಲೀಸರಿಗೆ ಶೂಟ್ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದರು ಕೂಡ ಆರೋಪಿಗಳ ಮೊಣಕಾಲಿನ ಕೆಳಭಾಗಕ್ಕೆ ಶೂಟ್ ಮಾಡಿ ಅವರನ್ನು ತಡೆಯಬಹುದಿತ್ತು. ಆದರೆ ಪೊಲೀಸರು ಆರೋಪಿಗಳ ದೇಹದ ಪ್ರಮುಖ ಅಂಗಾಂಗಗಳಿಗೆ ಶೂಟ್ ಮಾಡಿದ್ದು ಯಾಕೆ?
ಪಿಯುಸಿಎಲ್ ಸಂಸ್ಥೆ ಪೊಲೀಸರ ಈ ಕೃತ್ಯವನ್ನು ಯೋಜಿತ ಕೊಲೆ ಎಂದು ಕರೆದಿದ್ದು, ಎನ್‍ಕೌಂಟರ್ ನಡೆಸಿದ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲು ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದೆ. ಅಲ್ಲದೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ. ಇದನ್ನು ಓದಿ: ಕಳೆದ 7 ವರ್ಷಗಳಿಂದ ಪ್ರತಿದಿನವೂ ಸಾಯುತ್ತಿದ್ದೇವೆ: ನಿರ್ಭಯಾ ತಾಯಿ
ಪೊಲೀಸರ ವಶಕ್ಕೆ ನೀಡಲಾದ ಆರೋಪಿಗಳು ಅವರ ಕೈಯಲ್ಲೇ ಸುರಕ್ಷಿತರಾಗಿಲ್ಲದಿದ್ದರೆ ಅಕ್ರಮವಾಗಿ ಬಂಧಿಸಿರವರನ್ನು ಬಿಟ್ಟುಬಿಡಿ ಎಂದು ಸಂಸ್ಥೆ ತನ್ನ ಪ್ರಕಟನೆಯಲ್ಲಿ ಹೇಳಿದೆ. ಅಲ್ಲದೇ ಪೊಲೀಸರನ್ನು ವೈಭವೀಕರಸುತ್ತಿರುವುದುನ್ನು ನಿಲ್ಲಿಸುವಂತೆ ತಿಳಿಸಿದ್ದು, ಪೊಲೀಸರು ಯೋಜಿತ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದೆ. ಇದನ್ನು ಓದಿ: ಶೀಘ್ರದಲ್ಲೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ