ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಮೂರು ದಿನಗಳು ಬಾಕಿ ಇದೆ. ಹೀಗಿರುವಾಗ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಅಕ್ರಮವಾಗಿ 5.8 ಕೋಟಿ ರೂ. ನಗದು ಸಾಗಿಸುತ್ತಿದ್ದ ಕಾರ್ ಒಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜನಗಾಂವ್ ಜಿಲ್ಲೆಯ ಪೆಂಬರ್ತಿ ಸಮೀಪದ ಎಸ್‍ಎಸ್‍ಟಿ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸುತ್ತಿದ್ದಾಗ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಹಣ ಪತ್ತೆಯಾಗಿದೆ. ಕರ್ನಾಟಕ ಕೇಡರ್ ನ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ಅವರ ನೇತೃತ್ವದಲ್ಲಿ ಹಣ ಸೀಜ್ ಮಾಡಲಾಗಿದೆ.
Advertisement
Advertisement
ಕಾರ್ ನಲ್ಲಿದ್ದ 5,80,65,000 ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ 2 ಸಾವಿರ ರೂ. ಮುಖಬೆಲೆಯ 35,926 ನೋಟುಗಳು ಹಾಗೂ 500 ರೂಪಾಯಿ ಮುಖಬೆಲೆಯ 20,051 ನೋಟುಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ಈವರೆಗೆ 100 ಕೋಟಿ ರೂ.ಗೂ ಅಧಿಕ ಹಣ ಹಾಗೂ ಕೋಟ್ಯಂತರ ರೂ. ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಮತದಾನವು ಇದೇ 7ರಂದು ನಡೆಯಲಿದ್ದು, 11ರಂದು ಮತ ಏಣಿಕೆ ಪ್ರಕ್ರಿಯೆ ನಡೆಯಲಿದೆ.
Advertisement
ನವೆಂಬರ್ 8ರಂದು ಹವಾಲ ನಡೆಸಿದ್ದ ತಂಡವನ್ನು ಹೈದರಾಬಾದ್ ನಗರ ಪೊಲೀಸರು ಬಂಧಿಸಿ, 7.51 ಕೋಟಿ ರೂ. ವನ್ನು ವಶಕ್ಕೆ ಪಡೆದಿದ್ದರು.
Visuals from Telangana: Police seized Rs 5,80,65,000 cash from a car at a check post in Jangaon, Warangal yesterday night. Three persons travelling in the car have been detained. Case registered, further investigation underway. pic.twitter.com/n9vEST6a1I
— ANI (@ANI) December 4, 2018
Telangana: Police seized Rs 5,80,65,000 cash from a car at a check post in Jangaon, Warangal yesterday night. Three persons travelling in the car have been detained. Case registered, further investigation underway.
— ANI (@ANI) December 4, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv