ಹೈದರಾಬಾದ್: ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ ಅದಾನಿ ಫೌಂಡೇಶನ್ ವಾಗ್ದಾನ ಮಾಡಿದ್ದ 100 ಕೋಟಿ ರೂ. ದೇಣಿಗೆಯನ್ನು ತಮ್ಮ ಸರ್ಕಾರ ನಿರಾಕರಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ತಿಳಿಸಿದ್ದಾರೆ.
ಸೌರಶಕ್ತಿ ಪೂರೈಕೆ ಯೋಜನೆ ಗುತ್ತಿಗೆ ಪಡೆದುಕೊಳ್ಳಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಗೌತಮ್ ಅದಾನಿ ವಿರುದ್ಧ ದೋಷಾರೋಪಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ವಿಶೇಷ ಮುಖ್ಯ ಕಾರ್ಯದರ್ಶಿ ಮತ್ತು ಕೈಗಾರಿಕಾ ಉತ್ತೇಜನ, ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಜಯೇಶ್ ರಂಜನ್ ಅವರು ಡಾ.ಪ್ರೀತಿ ಅದಾನಿಗೆ ಬರೆದ ಪತ್ರದಲ್ಲಿ, ‘ನಿಮ್ಮ ಪ್ರತಿಷ್ಠಾನದ ಪರವಾಗಿ ಯಂಗ್ ಇಂಡಿಯಾ ಸ್ಕಿಲ್ಸ್ ಯೂನಿವರ್ಸಿಟಿಗೆ 100 ಕೋಟಿ ರೂ. ನೀಡಿದ್ದಕ್ಕಾಗಿ ನಾವು ನಿಮಗೆ ಧನ್ಯವಾದ ತಿಳಿಸುತ್ತೇವೆ. ಪ್ರಸ್ತುತ ಸಂದರ್ಭದಲ್ಲಿ ಉದ್ಭವಿಸಿರುವ ವಿವಾದಗಳನ್ನು ಗಮನದಲ್ಲಿಟ್ಟುಕೊಂಡು ಹಣ ವರ್ಗಾವಣೆ ಮಾಡದಂತೆ ಮಾನ್ಯ ಮುಖ್ಯಮಂತ್ರಿಗಳು ನನಗೆ ಸೂಚನೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.
Advertisement
US ನಲ್ಲಿ ಅದಾನಿ ವಿರುದ್ಧ ದೋಷಾರೋಪಣೆ ಮಾಡಿದ ನಂತರ, ತೆಲಂಗಾಣ ಸರ್ಕಾರ ಮತ್ತು ಮುಖ್ಯಮಂತ್ರಿ ರೆಡ್ಡಿ ಅವರು ಭಾರತ್ ರಾಷ್ಟ್ರ ಸಮಿತಿ ಮತ್ತು ಬಿಜೆಪಿಯಿಂದ ಟೀಕೆಗೆ ಗುರಿಯಾದರು.
Advertisement
ತೆಲಂಗಾಣದ ಗೌರವ ಮತ್ತು ಘನತೆಯನ್ನು ರಕ್ಷಿಸಲು, ನಾನು ಮತ್ತು ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳನ್ನು ಒಳಗೊಂಡ ಯಾವುದೇ ಅನಗತ್ಯ ವಿವಾದಗಳನ್ನು ತಪ್ಪಿಸಲು, ನಾವು ಅದಾನಿ ಅವರ ದೇಣಿಗೆಯನ್ನು ತಿರಸ್ಕರಿಸಲು ನಿರ್ಧರಿಸಿದ್ದೇವೆ. ನಾವು ಯಾರಿಂದಲೂ ಒಂದು ರೂಪಾಯಿ ಕೂಡ ತೆಗೆದುಕೊಂಡಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.