ಬೆಂಗಳೂರು: ತೆಲಂಗಾಣ ಆರೋಗ್ಯ ಇಲಾಖೆ ಬೆಂಗಳೂರು ಟೆಕ್ಕಿ ಕೊರೋನಾ ವೈರಸ್ ತುತ್ತಾಗಿರೋದನ್ನು ಖಚಿತ ಪಡಿಸಿದೆ. ಟೆಕ್ಕಿಯನ್ನು ಹೈದರಾಬಾದ್ ನಗರದ ಗಾಂಧಿ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ಟೆಕ್ಕಿಗೆ ಕೊರೋನಾ ವೈರಸ್ ಬಂದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಟೆಕ್ಕಿ ಕಚೇರಿಯ ಕೆಲಸಕ್ಕಾಗಿ ಫೆಬ್ರವರಿ 17ರಂದು ದುಬೈಗೆ ತೆರಳಿದ್ದರು. ದುಬೈನಿಂದ ಫೆಬ್ರವರಿ 20ರಂದು ಬೆಂಗಳೂರಿಗೆ ವಾಪಸ್ ಆಗಿದ್ದರು. ಎರಡು ದಿನ ಕೆಲಸಕ್ಕೆ ಹಾಜರಾಗಿದ್ದ ಟೆಕ್ಕಿ ಹೈದರಾಬಾದ್ ನಲ್ಲಿರುವ ಊರಿಗೆ ತೆರಳಿದ್ದರು. ಮನೆಗೆ ಬರುವಾಗಲೇ ಟೆಕ್ಕಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಈ ಕುರಿತು ಕುಟುಂಬಕ್ಕೂ ಮಾಹಿತಿ ನೀಡಿದ್ದರು. ತದನಂತರ ಸಿಕಂದರಾಬಾದ್ ನಲ್ಲಿರು ಅಪೋಲೋ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದರು. ಜ್ವರ ಕಡಿಮೆಯಾಗದಿದ್ದಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು.
Advertisement
ಟೆಕ್ಕಿ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದು, ಪ್ರೊಜೆಕ್ಟ್ ವರ್ಕ್ ಸಂಬಂಧಿಸಿದಂತೆ ದುಬೈಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊರೋನಾ ಸೋಂಕಿಗೆ ತುತ್ತಾಗಿರುವ ಟೆಕ್ಕಿ ಬೆಂಗಳೂರಿನ ಪಿಜಿಯಲ್ಲಿ ವಾಸವಾಗಿದ್ದರು ಕುರಿತು ತಿಳಿದು ಬಂದಿದೆ.
Advertisement
Advertisement
ಮಾರ್ಚ್ 1ರಂದು ಜ್ವರ ಹಾಗೂ ಕಫ ಕಡಿಮೆಯಾಗದಿದ್ದಾಗ ಟೆಕ್ಕಿಯ ರಕ್ತದ ಮಾದರಿಯನ್ನು ತಪಾಸಣೆಗಾಗಿ ಗಾಂಧಿ ಆಸ್ಪತ್ರೆಗೆ ಕಳಿಸಿದಾಗ ಮಾರ್ಚ್ 2ರಂದು ಕೊರೋನಾ ಸೋಂಕು ಇರೋದು ಪತ್ತೆಯಾಗಿತ್ತು. ಕೂಡಲೇ ಆಸ್ಪತ್ರೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಾಹಿತಿ ರವಾನಿಸಿತ್ತು. ಪುಣೆಯ ಲ್ಯಾಬ್ ನಿಂದಲೂ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ.
Advertisement
ಕೊರೋನಾ ವೈರಸ್ ಗೆ ತುತ್ತಾಗಿರುವ ಟೆಕ್ಕಿಯನ್ನು ತೀವ್ರನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತೆಲಂಗಾಣ ಆರೋಗ್ಯ ಸಚಿವರು ಖಚಿತಪಡಿಸಿದ್ದಾರೆ. ಕೊರೋನಾ ಸೋಂಕಿತ ಟೆಕ್ಕಿ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದನು. ಹಾಗಾಗಿ ಟೆಕ್ಕಿ ಪ್ರಯಾಣ ಬೆಳೆಸಿದ ಬಸ್ ನಲ್ಲಿಯ ಪ್ರಯಾಣಿಕರ ಮಾಹಿತಿಗೆ ಅಧಿಕಾರಿಗಳು ಮುಂದಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಟೆಕ್ಕಿ ಸುಮಾರು 80 ಜನರೊಂದಿಗೆ ಸಂಪರ್ಕದಲ್ಲಿದ್ದನು. ಬಸ್ ನಲ್ಲಿ ಸಹ ಪ್ರಯಾಣಿಕರು, ಕುಟುಂಬಸ್ಥರು, ವೈದ್ಯರು ಮತ್ತು ಅಪೋಲೋ ಆಸ್ಪತ್ರೆಯ ಸಿಬ್ಬಂದಿ ಜೊತೆ ಸಂಪರ್ಕದಲ್ಲಿದ್ದನು. ಎಲ್ಲರ ಮೇಲೆ ನಿಗಾ ಇರಿಸಲಾಗಿದೆ. ಈ ಸಂಬಂಧ ಟೆಕ್ಕಿ ಕೆಲಸ ಮಾಡುತ್ತಿರುವ ಕಂಪನಿ ಮತ್ತು ಆತ ಪ್ರಯಾಣ ಬೆಳೆಸಿದ ಬಸ್ ಮಾಲೀಕರಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ರಾಜೇಂದ್ರ ಹೇಳಿದ್ದಾರೆ.