ಹೈದರಾಬಾದ್: ಪತ್ರಿಕಾ ಗೋಷ್ಠಿ ವೇಳೆ ಸಹಾಯಕ ಪೊಲೀಸ್ ಆಯುಕ್ತರೊಬ್ಬರು ಮಹಿಳೆಯ ಕೆನ್ನೆಗೆ ಬಾರಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
Advertisement
ಬೇಗಂಪೇಟ್ ಸಹಾಯಕ ಪೊಲೀಸ್ ಆಯುಕ್ತರಾದ ಎಸ್ ರಂಗ ರಾವ್ ಪದ್ಮಾ ಎಂಬ ಆರೋಪಿ ಮಹಿಳೆಯ ಕಪಾಳಕ್ಕೆ ಹೊಡೆದಿದ್ದಾರೆ. ಈಕೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆಂದು ಪತ್ರಿಕಾ ಗೋಷ್ಠಿ ವೇಳೆ ಪೊಲೀಸರು ಹೇಳಿದ್ದರು. ಈ ವೇಳೆ ಮಹಿಳೆ ತಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ವಾದಿಸಿದ್ದಳು.
Advertisement
Advertisement
Advertisement
ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ತನಿಖೆ ನಡೆಸಲಾಗ್ತಿದೆ ಎಂದು ಉತ್ತರ ವಲಯ ಉಪ ಪೊಲೀಸ್ ಆಯುಕ್ತರಾದ ಬಿ. ಸುಮತಿ ಹೇಳಿದ್ದಾರೆ. ಎಸಿಪಿ ವಿರುದ್ಧ ತನಿಖೆ ಆರಂಭವಾಗಿದೆ. ಅವರಿಂದ ವಿವರಣೆ ಕೇಳಿದ್ದೇವೆ. ಅದರ ಆಧಾರದ ಮೇಲೆ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಸುಮತಿ ತಿಳಿಸಿದ್ದಾರೆ.
ಪದ್ಮಾ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆ. ಆಕೆ ಹಾಗೂ ಇನ್ನೂ ಮೂವರು ಮಹಿಳೆಯರು ಜನರ ಗಮನ ಬೇರೆಡೆ ಸೆಳೆದು ಹಲವು ಅಪರಾಧಗಳನ್ನ ಎಸಗಿದ್ದಾರೆ. ನಾಲ್ವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಕರುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪ ಹೊತ್ತಿರುವ ಎಸಿಪಿ ಅವರನ್ನ ಸಂಪರ್ಕಿಸಿದಾಗ, ಮಹಿಳೆ ಪೊಲೀಸರ ಮೇಲೆಯೇ ಆರೋಪಗಳನ್ನ ಮಾಡ್ತಿದ್ದರಿಂದ ಪತ್ರಿಕಾ ಗೋಷ್ಠಿಯಿಂದ ಹೊರಹೋಗುವಂತೆ ನಾನು ಮಹಿಳೆಯನ್ನ ತಳ್ಳಿದೆ ಎಷ್ಟೇ ಎಂದು ಹೇಳಿದ್ದಾರೆ.
#WATCH: S Ranga Rao, Begumpet Assistant Commissioner of Police (ACP), slaps a woman accused of theft during a press conference in #Hyderabad; ACP was later transferred to the City Armed Reserve (CAR) headquarters #Telangana pic.twitter.com/bQzdZoiv7G
— ANI (@ANI) February 17, 2018