ಹೈದಾರಬಾದ್: ಮೂಸಾಪೇಟ್‍ನ ಪೊಲೀಸ್ ಪೇದೆಯೊಬ್ಬರು ಪರೀಕ್ಷೆ ಬರೆಯಲು ಬಂದಿದ್ದ ತಾಯಿಯ ಕಂದಮ್ಮನಿಗೆ ಅಮ್ಮನಾಗಿ ಸಾಂತ್ವನ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ನಾಲ್ಕು ತಿಂಗಳ ಮಗುವಿನ ತಾಯಿ ಪರೀಕ್ಷೆ ಬರೆಯಲು ಬಂದಿರುತ್ತಾರೆ. ಆ ತಾಯಿಗೆ ತೆಲಂಗಾಣ ಪೊಲೀಸ್ ಪೇದೆ ಮಗುವನ್ನು ನೋಡಿಕೊಳ್ಳುವ ಮೂಲಕ ಸಹಾಯ ಮಾಡಿದ್ದಾರೆ. ಪರೀಕ್ಷೆ ಕೇಂದ್ರದ ಹೊರಗೆ ಅಳುತ್ತಿದ್ದ ಮಗುವಿಗೆ ಸಾಂತ್ವನ ಮಾಡಲು ಯತ್ನಿಸುತ್ತಿದ್ದ ಛಾಯಾಚಿತ್ರವನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡುವ ಮೂಲಕ ಪೊಲೀಸ್ ಪೇದೆಗೆ ಹೃತ್ಪೂರ್ವಕ ವಂದನೆಗಳು ಎಂದು ಐಪಿಎಸ್ ಅಧಿಕಾರಿ ರೆಮಾ ರಾಜೇಶ್ವರಿ ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Advertisement
Advertisement
ಪೊಲೀಸ್ ಪೇದೆ ಮುಜಿಬ್ ಉರ್ ರಹಮಾನ್ ಅವರು ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಮೂಸಾಪೇಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ರಹಮಾನ್ ಅವರನ್ನು ಬಾಬುಸ್ ಜೂನಿಯರ್ ಕಾಲೇಜಿನಲ್ಲಿ ನಡೆಯುವ ಪರೀಕ್ಷಾ ಕೇಂದ್ರಕ್ಕೆ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲಾಗಿತ್ತು.
Advertisement
ಮಗುವಿನ ತಾಯಿ ಸ್ನಾತಕೋತ್ತರ ಪದವೀಧರೆಯಾಗಿದ್ದು, ಯೋಗ್ಯ ಕೆಲಸವಿರಲಿಲ್ಲ. ಅಷ್ಟೇ ಅಲ್ಲದೇ ಮಗುವಿನ ತಾಯಿ ಪೊಲೀಸ್ ಪೇದೆಯಾಗುವ ಆಸೆಯನ್ನು ಹೊಂದಿದ್ದಳು. ಹೀಗಾಗಿ ತಾಯಿ ಪರೀಕ್ಷೆ ಬರೆಯಲು ಬಂದಿದ್ದು, ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು. 14 ವರ್ಷದ ಹುಡುಗಿಯನ್ನು ಪರೀಕ್ಷಾ ಕೇಂದ್ರದಲ್ಲಿ ಉಸ್ತುವಾರಿಯಾಗಿ ಮಾಡಲಾಗಿತ್ತು. ಈ ವೇಳೆ ಮಗು ಅಳುತ್ತಿದ್ದದ್ದನ್ನು ಕಂಡು ಕರೆದುಕೊಂಡು ಬಂದು ನಾನು ಸಾಂತ್ವನ ಮಾಡಿದೆ ಎಂದು ರಹಮಾನ್ ಹೇಳಿದರು.
Advertisement
ರಹಮಾನ್ ಅವರಿಗೆ ಇಬ್ಬರು ಮಕ್ಕಳಿದ್ದು, ಮಗ ಚೀನಾದಲ್ಲಿ ಮೆಡಿಕಲ್ ಓದುತ್ತಿದ್ದಾನೆ. ಮಗಳು ಮುಂದಿನ ವರ್ಷ ಶಾಲೆಯನ್ನು ಮುಗಿಸುತ್ತಿದ್ದಾರೆ.
https://twitter.com/rama_rajeswari/status/1046456562825539585
https://twitter.com/rama_rajeswari/status/1046298641273577472
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews