ಹೈದರಾಬಾದ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಅವರು ನೀಡಿದ್ದ ಹೇಳಿಕೆ ಕುರಿತಂತೆ ತೆಲಂಗಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥ ಮತ್ತು ಸಂಸದ ರೇವಂತ್ ರೆಡ್ಡಿ ಸೇರಿದಂತೆ ತೆಲಂಗಾಣದ ಕಾಂಗ್ರೆಸ್ ಸಮಿತಿ (ಟಿಪಿಸಿಸಿ)ಯ ಇತರ ಹಿರಿಯ ನಾಯಕರು ದೂರು ನೀಡಿದ್ದಾರೆ.
ಫೆಬ್ರವರಿ 11ರಂದು ಉತ್ತರಾಖಂಡದಲ್ಲಿ ನಡೆಸಿದ ರ್‍ಯಾಲಿ ವೇಳೆ ಮಾತನಾಡಿದ ಹಿಮಂತಾ ಬಿಸ್ವಾ ಅವರು, 2016ರ ಸೆಪ್ಟೆಂಬರ್‌ನಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ರಾಹುಲ್ ಗಾಂಧಿ ಅವರು ಪುರಾವೆಯನ್ನು ಕೇಳಿದ್ದರು. ಅದೇ ರೀತಿ ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಮಗ ಎಂಬುವುದಕ್ಕೆ ಬಿಜೆಪಿ ಏನಾದರೂ ಪುರಾವೆ ಕೇಳಿದೆಯೇ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಕುರಿತಂತೆ ರಾಜ್ಯಾದ್ಯಂತ ಕಾಂಗ್ರೆಸ್‍ನಿಂದ ಹಲವಾರು ದೂರುಗಳನ್ನು ದಾಖಲಿಸಲಾಗಿದೆ ಮತ್ತು ದೂರಿನಲ್ಲಿ ರಾಹುಲ್ ಗಾಂಧಿಯವರ ಗೌರವಾನ್ವಿತ ಕುಟುಂಬದ ಹಿನ್ನೆಲೆಯನ್ನು ಉಲ್ಲೇಖಿಸಲಾಗಿದೆ.
Advertisement
Advertisement
ರಾಹುಲ್ ಗಾಂಧಿ ಅವರ ಮುತ್ತಜ್ಜರಾದ ಮೋತಿಲಾಲ್ ನೆಹರು ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಮತ್ತು ದೇಶಕ್ಕಾಗಿ ಹಲವಾರು ವರ್ಷಗಳ ಜೈಲುವಾಸ ಮಾಡಿದ್ದಾರೆ. ಅವರ ಮುತ್ತಜ್ಜ ಪಂಡಿತ್ ಜವಾಹರಲಾಲ್ ನೆಹರು, ಅಜ್ಜಿ ಇಂದಿರಾ ಗಾಂಧಿ ಮತ್ತು ಅವರ ತಂದೆ ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಗಳಾಗಿ ಈ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಕೆಸಿಆರ್‌ಗೆ ಸರ್ಜಿಕಲ್ ಸ್ಟ್ರೈಕ್ ವೀಡಿಯೋ ಪುರಾವೆ ನೀಡಿದ ಅಸ್ಸಾಂ ಸಿಎಂ
Advertisement
Advertisement
ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಅವರು 1990ರ ಅಕ್ಟೋಬರ್ 19ರಂದು ಐತಿಹಾಸಿಕ ಚಾರ್ಮಿನಾರ್‍ನಿಂದ ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರಗಳಲ್ಲಿ ತಮ್ಮ ಸದ್ಭಾವನಾ ಯಾತ್ರೆಯನ್ನು ಪ್ರಾರಂಭಿಸಿದ್ದರು. 2018ರ ಐತಿಹಾಸಿಕ ಚಾರ್‌ಮಿನಾರ್‌ನಲ್ಲಿ ನಡೆದ ಯಾತ್ರಾ ಸ್ಮರಣಾರ್ಥ ಸಭೆಯಲ್ಲಿ ರಾಹುಲ್ ಗಾಂಧಿ ಕೂಡ ರಾಜೀವ್ ಗಾಂಧಿ ಸದ್ಭವನದಲ್ಲಿ ಭಾಗವಹಿಸಿದ್ದರು.
ಇದೀಗ ಅಸ್ಸಾಂ ಮುಖ್ಯಮಂತ್ರಿ ಅವರ ಹೇಳಿಕೆಗಳು ತಮಗೆ ಅತೀವ ನೋವನ್ನುಂಟು ಮಾಡಿದೆ ಹಾಗೂ ಹಾಗಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ, 505 (2) ಮತ್ತು 294 ರ ಅಡಿಯಲ್ಲಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಟ್ವೀಟ್ ವಿರುದ್ಧ ಒಂದು ಸಾವಿರಕ್ಕೂ ಹೆಚ್ಚು ಕೇಸ್ ದಾಖಲು
ಅಸ್ಸಾಂ ಸಿಎಂ ಮಹಿಳೆಯರ ಅವಹೇಳನಕಾರಿ ಹೇಳಿಕೆಗಳಿಗೆ ಪ್ರಧಾನಿ ಮೋದಿ, ಗೃಹ ಸಚಿವ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರತಿಕ್ರಿಯಿಸಬೇಕು ಮತ್ತು ಅವರನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.