ಹೈದರಾಬಾದ್: ಹೃದಯ ಸಂಬಂಧಿ ಸಮಸ್ಯೆ, ಜ್ವರದಿಂದ ಬಳಲುತ್ತಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K Chandrashekar Rao) ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನಂತರ ಡಿಸ್ಚಾರ್ಜ್ ಆಗಿದ್ದಾರೆ.
ಜ್ವರ, ಹೃದಯದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈದರಾಬಾದ್‍ನ ಯಶೋಧಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರು ಆಂಜಿಯೋಗ್ರಾಮ್ (angiogram) ಪರೀಕ್ಷೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Advertisement
Concerned to learn that Hon’ble Chief Minister Shri Chandrashekar Rao garu is unwell.
I wholeheartedly pray Maa Durga to bless him with an early recovery and a long, healthy life.@TelanganaCMO
— Bandi Sanjay Kumar (@bandisanjay_bjp) March 11, 2022
Advertisement
ಆಸ್ಪತ್ರೆ ವೈದ್ಯರಾದ ಎಂ. ವಿ. ರಾವ್ ಅವರು ಮಾತನಾಡಿ, ಪ್ರತಿವರ್ಷ ಚಂದ್ರಶೇಖರ್ ರಾವ್ ಅವರಿಗೆ ಎಲ್ಲ ರೀತಿಯ ತಪಾಸಣೆ ಮಾಡುತ್ತೇವೆ. ಸ್ವಲ್ಪ ಜ್ವರ, ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಅವರ ಹೃದಯದಲ್ಲಿ ಯಾವುದೇ ಬ್ಲಾಕ್‍ಗಳು ಕಂಡುಬಂದಿಲ್ಲ. ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಮಾಡುತ್ತೇವೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಕೆಲಸ ಬಿಟ್ಟು ಬಿರಿಯಾನಿ ಸ್ಟಾಲ್ ತೆರೆದ ಇಂಜಿನಿಯರ್ ಯುವಕರು