ಅಮರಾವತಿ: ಜಂಗಾವ್‍ನಲ್ಲಿ ನಡೆದ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರು ಆಯೋಜಿಸಿದ್ದ ಪ್ರಜಾ ಸಂಗ್ರಾಮ ಯಾತ್ರೆಯಲ್ಲಿ ಬಿಜೆಪಿ ಹಾಗೂ ಟಿಆರ್‌ಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಎರಡು ಪಕ್ಷದ ಕಾರ್ಯಕರ್ತರು ಪರಸ್ಪರ ಹಲ್ಲೆ ನಡೆಸಿದ ಪರಿಣಾಮವಾಗಿ ಅನೇಕರಿಗೆ ಗಂಭೀರ ಗಾಯಗಳಾಗಿವೆ. ಬಂಡಿ ಸಂಜಯ್ ಕುಮಾರ್ ಅವರು ಹಮ್ಮಿಕೊಂಡಿದ್ದ ಪಾದಯಾತ್ರೆ ಮೂರನೇ ಹಂತದಲ್ಲಿದ್ದು, ಜಂಗಾವ್ ಜಿಲ್ಲೆ ತಲುಪಿತ್ತು. ಈ ವೇಳೆ ಸಂಜಯ್ ಕುಮಾರ್ ಅವರು ಜನರ ಜೊತೆ ಸಂವಾದ ನಡೆಸಲು 5 ಜಿಲ್ಲೆಗಳಾದ್ಯಂತ ಹಲವಾರು ಕ್ಷೇತ್ರಗಳಲ್ಲಿ 328 ಕಿ.ಮೀ ಸಂಚರಿಸಲು ಉದ್ದೇಶಿಸಿದ್ದರು.
Advertisement
#WATCH | Telangana: Clash b/w BJP & TRS workers during state BJP chief Bandi Sanjay Kumar’s Praja Sangrama Yatra, in Jangaon. Injuries reported
Police say, “Both parties attacked each other.Police brought situation under control. If we receive complaint, case will be registered” pic.twitter.com/XB7lSfdoA7
— ANI (@ANI) August 15, 2022
Advertisement
ದೇವರುಪ್ಪುಳ ಗ್ರಾಮದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಬಂಡಿ ಸಂಜಯ್ ಕುಮಾರ್ ಮಾತನಾಡುವಾಗ ಅಲ್ಲಿಗೆ ಆಗಮಿಸಿದ್ದ ಟಿಆರ್‌ಎಸ್ ಕಾರ್ಯಕರ್ತರು ಭಾಷಣ ನಿಲ್ಲಿಸಲು ಯತ್ನಿಸಿದರು. ಬಿಜೆಪಿ ಕಾರ್ಯಕರ್ತರು ಟಿಆರ್‌ಎಸ್ ಕಾರ್ಯಕರ್ತರನ್ನು ತಡೆಯಲು ಯತ್ನಿಸಿದಾಗ 2 ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು. 2 ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಇದನ್ನೂ ಓದಿ: ಟೆಲಿಪ್ರಾಂಪ್ಟರ್ ಬಳಸದೇ ಕೆಂಪುಕೋಟೆಯಲ್ಲಿ ಭಾಷಣ ಮಾಡಿದ ಮೋದಿ
Advertisement
Advertisement
ತಕ್ಷಣವೇ ಪೊಲೀಸರು ಮಧ್ಯಪ್ರವೇಶ ಮಾಡಿ 2 ಗುಂಪನ್ನು ಚದುರಿಸಿದ್ದಾರೆ. 6 ಟಿಆರ್‌ಎಸ್ ಮತ್ತು 4 ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಎರಡು ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದರು. ಆದರೆ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘಟನಟ ಸಂಬಂಧಿಸಿ ದೂರು ಬಂದರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಧ್ವಜಾರೋಹಣದ ವೇಳೆ ಎಡವಟ್ಟು- ಒಂದೇ ಗ್ರಾಮದ 2 ಸ್ಥಳಗಳಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ